×
Ad

ಬಿಜೆಪಿ ನಾಯಕಿಯ ಸೆಕ್ಸ್ ವೀಡಿಯೊ ವೈರಲ್

Update: 2016-12-29 12:11 IST

ರಾಂಚಿ, ಡಿ.29: ಜಾರ್ಖಂಡ್ ರಾಜ್ಯದ ಧನಬಾದ್ ಮೂಲದ ಬಿಜೆಪಿ ನಾಯಕಿಯೊಬ್ಬರ ಸೆಕ್ಸ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಕಾಣಿಸುವ ಪುರುಷನೇ ಈ ವೀಡಿಯೊ ಸೋರಿಕೆ ಮಾಡಿದ್ದು ಮಹಿಳೆ ಈ ಕ್ರಮವನ್ನು ತನ್ನ ಗೌರವಕ್ಕೆ ಚ್ಯುತಿ ತರುವ ‘ರಾಜಕೀಯ ಷಡ್ಯಂತ್ರ’ವೆಂದು ಬಣ್ಣಿಸಿದ್ದಾಳೆ.

ವೀಡಿಯೊದಲ್ಲಿ ಕಾಣಿಸಿರುವ ಪುರುಷ ಸತ್ಯೇಂದ್ರ ಸಿನ್ಹ ಎಂದು ಬಿಜೆಪಿ ನಾಯಕಿ ಹೇಳಿದ್ದು ಆತ ತನ್ನ ‘ಹಳೆಯ ಸ್ನೇಹಿತ’ ಎಂದೂ ಆಕೆ ಹೇಳಿಕೊಂಡಿದ್ದಾಳೆ. ಆಕೆಯ ಪ್ರಕಾರ ಆ ವ್ಯಕ್ತಿ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಡುವ ಮುನ್ನ ಆಕೆಯಿಂದ ರೂ.7 ಲಕ್ಷ ವಸೂಲಿ ಮಾಡಲು ಯತ್ನಿಸಿದ್ದ.

ಆರೋಪಿ ವಿರುದ್ಧ ಧನಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ವೀಡಿಯೊದಲ್ಲಿ ಕಾಣುವ ಮಹಿಳೆ ಬಿಜೆಪಿಯ ನಾಮನಿರ್ದೇಶಿತ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದಾರೆನ್ನಲಾಗಿದ್ದು ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಸಿಂಗ್ ಆಕೆಯನ್ನು ಈ ಸ್ಥಾನಕ್ಕೆ ನೇಮಕ ಮಾಡಿದ ಮರುದಿನವೇ ವೀಡಿಯೊ ಬಹಿರಂಗಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News