×
Ad

ಮೋದಿ ವಿರುದ್ಧ ಮಾತಾಡಲು ಎಂ.ಟಿ. ವಾಸುದೇವನ್ ನಾಯರ್‌ಗೆ ಹಕ್ಕಿಲ್ಲ: ಕೇರಳ ಬಿಜೆಪಿ

Update: 2016-12-29 14:14 IST

ಕಲ್ಲಿಕೋಟೆ,ಡಿ.29: ಮಲೆಯಾಳಂನ ಖ್ಯಾತ, ಹಿರಿಯ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ವಿರುದ್ಧ ಅಸಹಿಷ್ಣುತೆಯ ಖಡ್ಗ ಝಳಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾಡಲು ಎಂಟಿ ವಾಸುದೇವನ್ ನಾಯರ್‌ಗೆ ಯಾವ ಹಕ್ಕೂ ಇಲ್ಲ ಎಂದು ಬಿಜೆಪಿ ಕೇರಳ ಪ್ರಧಾನ ಕಾರ್ಯದರ್ಶಿ ಎ.ಎನ್.ರಾಧಕೃಷ್ಣನ್ ಹೇಳಿದ್ದಾರೆ. ನಿನ್ನೆ ತುಂಚನ್ ಪರಂಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ವಿರುದ್ಧ ಎಂಟಿ ಮಾತಾಡಿದ್ದು, ಇದರಲ್ಲಿ ನಿಗೂಢ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ. ಇದೇವೇಳೆ ಕೇರಳ ವಿತ್ತ ಸಚಿವ ಐಸಾಕ್ ಥಾಮಸ್ "ಎಂ.ಟಿ.ವಾಸುದೇವನ್ ನಾಯರ್ ವಿರುದ್ಧ ಸಂಘಟಿತ ಬೆದರಿಕೆ ಒಡ್ಡಲಾಗುತ್ತಿದೆ. ಯಾರ ವಿರುದ್ಧ ಏನು ಹೇಳಬಹುದು ಎನ್ನುವ ಬಿಜೆಪಿ ಎಂಟಿ ವಿಷಯದಲ್ಲಿ ಅಹಂ ಪ್ರದರ್ಶಿಸುತ್ತಿದೆ" ಎಂದು ಹೇಳಿದ್ದಾರೆ. ಬಿಜೆಪಿಯನ್ನು ಕೇಳಿಯೇ ಯಾರು ಏನು ಮಾತಾಡಬೇಕೆ ಎಂದು ನಿರ್ಧರಿಸಬೇಕೆ" ಎಂದು ಅವರು ಪ್ರಶ್ನಿಸಿದ್ದಾರೆ. ತಿರೂರ್ ತುಂಚನ್ ಪರಂಬ್‌ನಲ್ಲಿ ಮೋದಿ ಸರಕಾರದ ನೋಟು ಅಮಾನ್ಯ ಕ್ರಮವನ್ನು ಎಂಟಿ ವಾಸುದೇವನ್ ನಾಯರ್ ವಿರೋಧಿಸಿ ಮಾತಾಡಿದ್ದರು. "ನೋಟು ನಿಷೇಧ ಮೂಲಕ ದೇಶದಲ್ಲಿ ಜಾರಿಗೆ ತರ ಬಯಸುವ ಆರ್ಥಿಕ ಸುಧಾರಣೆಯನ್ನು ವಿಮರ್ಶಿಸುವಷ್ಟು ಅರಿವು ಎಂಟಿಗಿಲ್ಲವೇ?" ಎಂದು ಐಸಾಕ್ ಪ್ರಶ್ನಿಸಿದ್ದಾರೆ.

"ಟಿ.ಪಿ. ಚಂದ್ರಶೇಖರ್ ಕೊಲೆ ನಡೆದಾಗ, ತ್ರಿತಲಾಕ್ ವಿವಾದ ನಡೆಯುತ್ತಿರುವಾಗ ಒಂದಕ್ಷರ ಮಾತಾಡದ ವ್ಯಕ್ತಿ ಇವರು. ಹೀಗಿದ್ದೂ ಎಂಟಿ ತುಂಚನ್ ಪರಂಬ್‌ಗೆ ಹೋಗಿ ಗಿಳಿಪಾಠ ಒಪ್ಪಿಸಿದ್ದರ ಹಿಂದೆ ಸ್ಥಾಪಿತ ಹಿತಾಸಕ್ತಿಯಿದೆ ಎನ್ನುವುದು ನಿರ್ವಿವಾದ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎ.ಎನ್. ರಾಧಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. "ಹುಚ್ಚು ಕ್ರಮಗಳನ್ನು ದೇಶಪ್ರೇಮವೆಂದು ವ್ಯಾಖ್ಯಾನಿಸಿ ಸುಮ್ಮನಿರಲು ಇನ್ನೂ ಕೇಂದ್ರಸರಕಾರಕ್ಕೆ ಸಾಧ್ಯವಿಲ್ಲ. ಎಂಟಿ ಮಾತ್ರವಲ್ಲ ಇನ್ನು ಮುಂದೆ ಬಹಳಷ್ಟು ಮಂದಿ ಈ ವಿಷಯದಲ್ಲಿ ಧ್ವನಿಯೆತ್ತಲಿದ್ದಾರೆ. ಅವರಿಗೆ ಇಷ್ಟವಾಗದ್ದನ್ನು ಹೇಳಿದರೆ ಬೈಗುಳ ಸುರಿಮಳೆ ಗೈಯ್ಯುವುದು ಸಂಘಪರಿವಾರದ ರೀತಿ. ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕಾಗಿ ತಂಡವನ್ನು ಅವರು ನಿಯೋಜಿಸಿದ್ದಾರೆ" ಎಂದು ಐಸಾಕ್ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ತುಂಚನ್ ಪರಂಬ್‌ನಲ್ಲಿ ಕೇರಳದ ಮೇರು ಸಾಹಿತಿ  ಎಂಟಿವಾಸುದೇವನ್ ನಾಯರ್, ಕೇರಳ ವಿತ್ತ ಸಚಿವ ಥಾಮಸ್ ಐಸಾಕ್‌ರ " ಕಪ್ಪುಹಣಬೇಟೆ, ಮಿಥ್ಯ -ಸತ್ಯ’ ಗ್ರಂಥವನ್ನು ಬಿಡುಗಡೆಗೊಳಿಸಿ ಮೋದಿಯ ನೋಟು ಅಮಾನ್ಯ ಕ್ರಮವನ್ನು ವಿರೋಧಿಸಿ ಮಾತಾಡಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News