ಭಾರತಕ್ಕೆ ಪ್ರವಾಸಿಗರನ್ನು ಸೆಳೆಯಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಈ ವಿದೇಶಿ ಪ್ರವಾಸಿಗ ಹೇಳಿದ್ದೇನು ?

Update: 2017-01-02 07:04 GMT

ಭಾರತದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಏನು ಮಾಡಬೇಕು ಎಂದು ಪ್ರಶ್ನೋತ್ತರ ವೆಬ್ ಸೈಟ್ quora.com ಕೇಳಿದಾಗ ಪ್ರವಾಸಿಗ ಕಾರ್ಲ್ ಎಲಿಯಟ್ ಏನು ಉತ್ತರ ಕೊಟ್ಟಿದ್ದಾರೆ ಗೊತ್ತೆ? “ನಾನು ಹೋದಲ್ಲೆಲ್ಲಾ ದುರುಗುಟ್ಟಿ ನನ್ನನ್ನು ನೋಡಬೇಡಿ. ನಾನು ಹೋದಲ್ಲೆಲ್ಲ ಜನರು ನನ್ನನ್ನೇ ತಿಂದು ಹಾಕುವಂತೆ ನೋಡುತ್ತಾರೆ.

ನಾನು ವಿದೇಶಗಳಲ್ಲಿ ಬಹಳಷ್ಟು ಕಡೆಗೆ ತಿರುಗಾಡಿದ್ದರೂ, ಭಾರತದಲ್ಲಿ ಮಾತ್ರ ಇಂತಹ ಅನುಭವವಾಗಿದೆ” ಎನ್ನುತ್ತಾರೆ ಕಾರ್ಲ್ ಎಲಿಯಟ್.

ಅವರು ಭಾರತಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಇನ್ನೂ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ:

►ನನ್ನ ಪತ್ನಿಯ ದೇಹವನ್ನು ವಿಚಿತ್ರವಾಗಿ ನೋಡಬೇಡಿ. ಬೇರೆ ಯಾವ ದೇಶದಲ್ಲೂ ಇದು ಕಾಣುವುದಿಲ್ಲ.

►ಅತೀ ಜನಸಂದಣಿ ಇದ್ದಾಗ ಮಹಿಳೆಯನ್ನು ಸ್ಪರ್ಶಿಸಿ ಆನಂದಿಸುವ ಹಕ್ಕು ಇದೆ ಎಂದು ತಿಳಿದುಕೊಳ್ಳಬೇಡಿ.

►ಮಹಿಳೆಯನ್ನು ಗೌರವಿಸಿ. ಕೇವಲ ಪ್ರವಾಸಿಗರನ್ನು ಮಾತ್ರವಲ್ಲ.

►ನಾವೆಲ್ಲರೂ ಲಕ್ಷಾಂತರ ದುಡ್ಡಿದ್ದು ತಿರುಗಾಡುತ್ತಿದ್ದೇವೆ ಎಂದುಕೊಳ್ಳಬೇಡಿ. ನಾವು ಹಣವನ್ನು ಕಷ್ಟಪಟ್ಟು ಉಳಿಸುತ್ತೇವೆ. ಭಾರತ ಮತ್ತು ಇತರ ದೇಶಗಳಿಗೆ ಭೇಟಿ ನೀಡುವ ಉದ್ದೇಶದಿಂದ ನಾವು ಬಹಳ ವರ್ಷ ಸೂಕ್ಷ್ಮವಾಗಿ ಬದುಕಿ ಹಣ ಕೂಡಿಟ್ಟಿದ್ದೇವೆ.

ನಮ್ಮ ಪ್ರವಾಸ ಆಯೋಜಕರಿಂದ ತೊಡಗಿ ರಿಕ್ಷಾ ಚಾಲಕರು, ಅಂಗಡಿ ಮಾಲೀಕರು, ಹೊಟೇಲ್ ಮಾಲೀಕರು ಹಾಗೂ ಚಾಯ್ ವಾಲಾಗಳೂ ಕೂಡ ಭಾರತೀಯರು ತೆರುವುದಕ್ಕಿಂತ ಹೆಚ್ಚು ಹಣ ಕೊಡುವಂತೆ ಕೇಳುತ್ತಾರೆ.

►ಕೆಲವು ಸ್ಥಳಗಳಲ್ಲಿ ಪ್ರವೇಶಿಸಲು ವಿದೇಶಿಯರಿಗೆ ಅಧಿಕ ಶುಲ್ಕ ವಿಧಿಸಬೇಡಿ. ತಾಜ್ ಮಹಲ್ ಪ್ರವೇಶಿಸಲು ಭಾರತೀಯನೊಬ್ಬ ರೂ. 20 ತೆರುವಾಗ ವಿದೇಶಿ ಪ್ರವಾಸಿಗ ರೂ. 750 ಏಕೆ ತೆರಬೇಕು?

►ನಿಮ್ಮ ದೇಶವನ್ನು ಸ್ವಚ್ಛಗೊಳಿಸಿ. ನಮ್ಮನ್ನು ಗೌರವಿಸಿ. ನಮ್ಮನ್ನು ಹುರಿದು ಮುಕ್ಕಲು ಪ್ರಯತ್ನಿಸಬೇಡಿ. ನಾವೇನು ಮೂರ್ಖರಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News