×
Ad

ಪ್ರಧಾನಿ ಎದುರೇ "ಬಿಜೆಪಿಯ ಖೇಲ್ ಖತಂ" ಎಂದ ಪಕ್ಷದ ಯುಪಿ ರಾಜ್ಯಾಧ್ಯಕ್ಷ !

Update: 2017-01-02 18:51 IST

ಲಕ್ನೋ, ಜ.2 : ಸೋಮವಾರ ಲಕ್ನೋದಲ್ಲಿ ನಡೆದ ಪರಿವರ್ತನ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಅವರ ನಾಲಗೆ ಜಾರಿದೆ. ಇದರಿಂದ ಆದ ಎಡವಟ್ಟು ಸಣ್ಣದಲ್ಲ. ಹಾಗಾಗಿ ಮೌರ್ಯ ಪ್ರಧಾನಿ ಎದುರೇ ತೀವ್ರ ಮುಖಭಂಗಕ್ಕೆ ಈಡಾಗಿದ್ದಾರೆ. 

ಉತ್ತರ ಪ್ರದೇಶದಲ್ಲಿ ಇನ್ನು ಸಪ ( ಸಮಾಜವಾದಿ ಪಕ್ಷ) ಹಾಗು ಭಾಜಪ ( ಬಿಜೆಪಿ) ದ ಆಟ ಮುಗಿಸಬೇಕು ಎಂದು ಬಿಟ್ಟಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಮೌರ್ಯ ! ನಿಜವಾಗಿ ಅವರು ಸಪ ( ಸಮಾಜವಾದಿ ಪಕ್ಷ) ಹಾಗು ಬಸಪ ( ಬಿಎಸ್ಪಿ) ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ ಜನರಲ್ಲಿ ಉತ್ಸಾಹ ತುಂಬಲು ಬಯಸಿದ್ದರು. 

ಇದಕ್ಕಾಗಿ ಭಾರೀ ಉತ್ಸಾಹದಿಂದ ಮಾತನಾಡಿದ ಮೌರ್ಯ ಅವರು ಸರಿಯಾದ ಸಮಯಕ್ಕೇ ಎಡವಿಬಿಟ್ಟರು. ಸಪ ( ಬಿಎಸ್ಪಿ) ಎನ್ನಬೇಕಾದಲ್ಲಿ ಭಾಜಪ ( ಬಿಜೆಪಿ) ಎಂದು ಬಿಟ್ಟರು. ಹೇಗಾಗಿರಬೇಡ ಅವರಿಗೆ ಮತ್ತು ವೇದಿಕೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ !

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಎಸ್ಪಿ ಹಾಗು ಬಿಎಸ್ಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೆರೆದಿದ್ದ ಜನತೆಗೆ ಅಭಿನಂದನೆ ಸಲ್ಲಿಸಿದರು. 

" ಬಿಜೆಪಿಯಲ್ಲಿ ಕೇವಲ ಕಾರ್ಯಕರ್ತನಾಗಿ ಬಂದು ಮುಖ್ಯಮಂತ್ರಿಯಾಗಿ , ಬಳಿಕ ಎರಡೂವರೆ ವರ್ಷ ಪ್ರಧಾನ ಸೇವಕನಾಗಿ ನೂರಾರು ಸಮಾವೇಶಗಳಲ್ಲಿ ಮಾತನಾಡುವ ಅವಕಾಶ ಸಿಕ್ಕಿದೆ. ಆದರೆ ಇಷ್ಟು ದೊಡ್ಡ ಸಮಾವೇಶ ಈವರೆಗೆ ನೋಡಿಲ್ಲ  " ಎಂದು ಅವರು ಜನರನ್ನು ಅಭಿನಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News