×
Ad

ಟ್ವೆಂಟಿ-20: ಕಿವೀಸ್‌ಗೆ ಸುಲಭ ಜಯ

Update: 2017-01-03 23:14 IST

ನೇಪಿಯರ್, ಜ.3: ಆತಿಥೇಯ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟ್ವೆಂಟಿ-20 ಇಂಟರ್‌ನ್ಯಾಶನಲ್ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿದೆ. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 141 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದ ಪರ ಮಹ್ಮೂದುಲ್ಲಾ (52 ರನ್) ಸರ್ವಾಧಿಕ ರನ್ ಬಾರಿಸಿದರು.

ಕಿವೀಸ್‌ನ ಪರ ಫರ್ಗ್ಯೂಸನ್(3-32) ಹಾಗೂ ವೀಲರ್(2-22) 5 ವಿಕೆಟ್ ಹಂಚಿಕೊಂಡರು.

ಗೆಲ್ಲಲು 142 ರನ್ ಗುರಿ ಪಡೆದಿದ್ದ ಕಿವೀಸ್ 2 ಓವರ್ ಬಾಕಿ ಇರುವಾಗಲೇ 4 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ನಾಯಕ ಕೇನ್ ವಿಲಿಯಮ್ಸನ್(ಅಜೇಯ 73 ರನ್, 55 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಗ್ರಾಂಡ್‌ಹೊಮ್(ಅಜೆಯ 41) 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 81 ರನ್ ಸೇರಿಸಿದರು.

ಅಜೇಯ ಅರ್ಧಶತಕ ಬಾರಿಸಿದ್ದ ವಿಲಿಯಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News