×
Ad

ಉಗ್ರರ ಅಡಗುದಾಣಕ್ಕೆ ಭದ್ರತಾ ಸಿಬ್ಬಂದಿ ದಾಳಿ: ಒಬ್ಬ ಉಗ್ರನ ಹತ್ಯೆ, ಮುಂದುವರಿದ ದಾಳಿ

Update: 2017-01-03 23:39 IST

ಬಾರಾಮುಲ್ಲಾ, ಜ.3: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿಯನ್ನು ತಡೆಯಲು ಭದ್ರತಾ ಸಿಬ್ಬಂದಿ ಅಹಿರ್ನಿಶಿ ಪ್ರಯತ್ನಿಸುತ್ತಿದ್ದಾರೆ. ಇಬ್ಬರು ಭಯೋತ್ಪಾದಕರ ಅಡಗು ತಾಣವನ್ನು ಪತ್ತೆ ಹಚ್ಚಲಾಗಿದ್ದು, ಅದರಲ್ಲಿ ಒಬ್ಬ ಉಗ್ರನನ್ನು ಕೊಲ್ಲಲಾಗಿದೆ.
ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಹರಿಟರ್ ಟಾರ್ಜೂ ಪ್ರಾಂತದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ಬೆಳಗಿನ ಜಾವ ಗುಂಡಿನ ಚಕಮಕಿ ಆರಂಭವಾಗಿದೆ. ವರದಿಗಳ ಪ್ರಕಾರ ಭಯೋತ್ಪಾದಕರು ಅಡಗಿರುವ ಸ್ಥಳವನ್ನು ಪತ್ತೆ ಹಚ್ಚಿದ ಭದ್ರತಾ ಪಡೆಗಳು ದಾಳಿ ನಡೆಸಿದ್ದಾರೆ. ಕಳೆದವಾರವಷ್ಟೇ ಬಂಡಿಪೋರಾ ಜಿಲ್ಲೆಯ ಶಾಹ್ಗುಂಡ್ ಹಾಜಿನ್‌ನಲ್ಲಿ ಇಂತಹದೇ ದಾಳಿಯಲ್ಲಿ ಭಯೋತ್ಪಾದಕರನ್ನು ಹತ್ತಿಕ್ಕಲಾಗಿತ್ತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News