×
Ad

ಯೋಧರಿಗೆ ಕಳಪೆ ಆಹಾರ ಆರೋಪ: ವರದಿ ಸಲ್ಲಿಸಲು ಪ್ರಧಾನಿ ಕಚೇರಿ ಸೂಚನೆ

Update: 2017-01-12 23:56 IST

ಹೊಸದಿಲ್ಲಿ, ಜ.12: ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂಬ ಯೋಧನ ಆರೋಪ ಮತ್ತು ಈ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಧಾನಮಂತ್ರಿಯ ಕಚೇರಿಯು ಗೃಹ ಸಚಿವಾಲಯಕ್ಕೆ ಸೂಚಿಸಿದೆ.
  ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ ಎಂದು ಬಿಎಸ್‌ಎಫ್ ಯೋಧ ತೇಜ್‌ಬಹಾ ದ್ದೂರ್ ಯಾದವ್ ವೀಡಿಯೊ ದೃಶ್ಯಾವಳಿ ಸಹಿತ ದೂರಿದ್ದ. ಕೇಂದ್ರ ಸರಕಾರ ಯೋಧರಿಗೆ ಉತ್ತಮ ಆಹಾರ ಒದಗಿಸುತ್ತಿದ್ದರೂ ಸೇನೆಯ ಉನ್ನತಾಧಿಕಾರಿಗಳು ಇವನ್ನು ಮಾರಾಟ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಬಡಪಾಯಿ ಯೋಧರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಯಾದವ್ ಆರೋಪಿಸಿದ್ದ. ಸಂಬಂಧಪಟ್ಟ ಎಲ್ಲರಿಗೂ ವರದಿ ನೀಡಲಿದ್ದೇವೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News