ಬಸ್ -ಟ್ರಕ್ ಡಿಕ್ಕಿ; 25 ಶಾಲಾ ಮಕ್ಕಳು ಸಾವು

Update: 2017-01-19 05:06 GMT

ಲಕ್ನೋ, ಜ.19: ಶಾಲಾ ಬಸ್ ಮತ್ತು ಟ್ರಕ್ ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ  ಬಸ್ ನಲ್ಲಿದ್ದ 25 ಶಾಲಾ ಮಕ್ಕಳು ಮೃತಪಟ್ಟು , 36 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಅಲಿಗಂಜ್ ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಅಲಿಗಂಜ್ ನ ಜೆ.ಎಸ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಈ ಅಫಘಾತದಲ್ಲಿ ಮೃತಪಟ್ಟವರು.  ಉತ್ತರ ಪ್ರದೇಶದಲ್ಲಿ ದಟ್ಟ ಮಂಜಿನಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೂ ಜೆ.ಎಸ್ ಪಬ್ಲಿಕ್ ಶಾಲೆಗೆ ರಜೆ ಇರಲಿಲ್ಲ. ಮಕ್ಕಳನ್ನು ಕೆರದೊಯ್ಯುತ್ತಿದ್ದ ಬಸ್ ದಟ್ಟ ಮಂಜಿನಿಂದಾಗಿ ದಾರಿ ಕಾಣದೆ ಟ್ರಕ್ ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News