ಎನ್ ಕೌಂಟರ್ ಗೆ ಲಷ್ಕರ್ ನ ಕಮಾಂಡರ್ ಬಲಿ

Update: 2017-01-19 05:50 GMT

ಶ್ರೀನಗರ, ಜ.19:  ಉತ್ತರ ಕಾಶ್ಮೀರದ ಬಂಡಿಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಪೊಲೀಸರು ಇಂದು ಬೆಳಗ್ಗೆ ನಡೆಸಿದ ಕಾರ್ಯಾಚರಣೆಯ ವೇಳೆ  ಎನ್ ಕೌಂಟರ್ ಗೆ  ಲಷ್ಕರ್  ಎ  ತೋಬ್ಬಾ ಉಗ್ರ ಸಂಘಟನೆಯ ಲೆಫ್ಟಿನೆಂಟ್ ಕಮಾಂಡರ್ ಅಬು ಮುಸೈಬ್  ಬಲಿಯಾಗಿದ್ದಾನೆ.  ಈ ವೇಳೆ ಓರ್ವ ಪೊಲೀಸ್ ಪೇದೆಗೆ ಗಾಯವಾಗಿದೆ

 ಬಂಡಿಪುರದ ಪಾರ್ರೈ ಮೊಹಲ್ಲಾದಲ್ಲಿ ಅಡಗಿರುವ ಉಗ್ರರಿಗಾಗಿ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

 ಜನವರಿ 6 ರಂದು  ಸೇನೆ ಜಮ್ಮು ಕಾಶ್ಮೀರದ ಬುದ್ಗಮ್ ಜಿಲ್ಲೆ ಮಚು ಪ್ರದೇಶದಲ್ಲಿ ಎನ್ ಕೌಂಟರ್ ನ ಡೆಸಿತ್ತು. ಈ ವೇಳೆ ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ  ಮುಝಫರ್ ಅಹಮದ್ ನನ್ನು ಹತ್ಯೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News