ನೋಟೇ ಇಲ್ಲ ಎನ್ನುತ್ತಿದ್ದ ಎಟಿಎಂ ಕೇಳಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಹಣ ಕೊಡುತ್ತಿದೆ!

Update: 2017-01-19 05:57 GMT

ಗುವಾಹಟಿ, ಜ.19: ಅಸ್ಸಾಂ ರಾಜ್ಯದ ಜಮುನಮುಖ್ ಎಂಬಲ್ಲಿನ ಎಟಿಎಂ ಒಂದು ಹಣದ ಹೊಳೆಯನ್ನೇ ಹರಿಸಿ ಹಲವರ ಜೇಬು ತುಂಬಿಸಿದೆ. ಜಮುನಮುಖ್ ನಗರದ ಸಿವಿಲ್ ಆಸ್ಪತ್ರೆಯ ಸಮೀಪವಿರುವ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ನಮೂದಿಸಿದ್ದಕ್ಕಿಂತ ನಾಲ್ಕು ಪಟ್ಟು ಹಣ ನೀಡಿದ ಕಾರಣ ಹಲವರು ಇದರ ‘ಸದುಪಯೋಗ’ ಪಡೆದುಕೊಂಡರು.

ಬ್ಯಾಂಕ್ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಯುವ ಹೊತ್ತಿಗೆ ಜನರು ಈ ಎಟಿಎಂಗೆ ಧಾವಿಸಿ ಸುಮಾರು ಏಳು ಲಕ್ಷ ರೂಪಾಯಿ ತಮ್ಮ ಜೇಬಿಗಿಳಿಸಿದ್ದರು.

‘‘ಸಿಸ್ಟಂ ದೋಷವೇ ಇದಕ್ಕೆ ಕಾರಣ. ಗ್ರಾಹಕನೊಬ್ಬ ರೂ.2000 ಹಿಂಪಡೆಯಬೇಕೆಂದು ಈ ಸಂಖ್ಯೆಯನ್ನು ನಮೂದಿಸಿದ್ದರೆ ಆತನಿಗೆ 2000 ರೂ.ನ ಎರಡು ನೋಟುಗಳು ದೊರೆಯುತ್ತಿತ್ತು’’ ಎಂದು ಬ್ಯಾಂಕಿನ ಶಾಖಾ ಮ್ಯಾನೇಜರ್ ಕೃಷ್ಣ ಭೌಮಿಕ್ ತಿಳಿಸಿದ್ದಾರೆ.

ಬ್ಯಾಂಕ್ ಈ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದೆಯಾದರೂ ಅಧಿಕೃತ ದೂರು ದಾಖಲಿಸಿಲ್ಲ.

ಎಟಿಎಂನಿಂದ ಅಧಿಕ ಹಣ ಪಡೆದವರನ್ನು ಗುರುತಿಸಿ ಅವರಿಂದ ಹಣ ಹಿಂಪಡೆಯಲು ಯತ್ನಿಸುವುದಾಗಿ ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಟೊಂಕ್ ನಲ್ಲಿಯೂ ಇಂತಹುದೇ ಘಟನೆ ಇದಕ್ಕೆ ಮುಂಚೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News