ಪ್ರಧಾನಿ ಮೋದಿ ಕಚೇರಿಯಿಂದಲೇ ಸ್ಪ್ಯಾಮ್ ಇಮೇಲ್ ?

Update: 2017-01-19 06:14 GMT

ಜೈಪುರ, ಜ.19: ಪ್ರಧಾನಿ ನರೇಂದ್ರ ಮೋದಿಯ ಕಚೇರಿಯಿಂದ ಬಂದ ಒಂದು ಇಮೇಲ್ ಸ್ಪ್ಯಾಮ್ ಇಮೇಲ್ ಆಗಿದ್ದರೆ ನಿಮಗೆ ಹೇಗನಿಸಬೇಡ? ಸಾಮಾನ್ಯವಾಗಿ ಯಾವುದೇ ಆಹ್ವಾನವಿಲ್ಲದೆ ಅನಗತ್ಯವಾಗಿ ಬರುವ ಇಮೇಲ್ ಗಳು ಸ್ಪ್ಯಾಮ್ ಫೋಲ್ಡರಿಗೆ ಹೋಗುವುದುಂಟು. ಆದರೆ ಪ್ರಧಾನಿ ಕಚೇರಿಯ ಇಮೇಲ್ ಸ್ಪ್ಯಾಮ್ ಗೆ ಹೋಗಲು ಕಾರಣ ?

ದಿ ಟೈಮ್ಸ್ ಆಫ್ ಇಂಡಿಯಾದ ವರದಿಗಾರರೊಬ್ಬರ ಖಾಸಗಿ ಇಮೇಲ್ ಗೆ ಇತ್ತೀಚೆಗೆಒಂದು ಇಮೇಲ್ ಬಂದಿತ್ತು. ಅದರ ವಿಷಯಸೂಚಿಯಲ್ಲಿ ‘ನ್ಯೂಸ್ ಫ್ರಾಮ್ ದಿ ವೀಕ್ : ಪಿಎಮ್ಸ್ ಅಡ್ರೆಸ್ ಎಟ್ ವೈಬ್ರೆಂಟ್ ಗುಜರಾತ್ ಸಮ್ಮಿಟ್, ಪಿಎಂ ಎಟ್ ಪ್ರವಾಸಿ ಭಾರತೀಯ ದಿವಸ್, ಗುರು ಗೋವಿಂದ್ ಸಿಂಗ್ ಜೀಸ್ ಬರ್ತ್ ಆನಿವರ್ಸರಿ ಸೆಲಬ್ರೇಶನ್ಸ್’ ಎಂದು ಬರೆಯಲಾಗಿತ್ತು. ವಾರವೊಂದರ ಅವಧಿಯ ಪ್ರಧಾನಿ ಭಾಗವಹಿಸಿದ್ದ ಕಾರ್ಯಕ್ರಮಗಳ ವಿವರ ಅದಾಗಿತ್ತು. ಆದರೆ ಈ ಇಮೇಲ್ ಸ್ಪ್ಯಾಮ್ ಫೋಲ್ಡರಿನಲ್ಲಿತ್ತು.

ಇಂತಹ ಸ್ಪ್ಯಾಮ್ ಇಮೇಲ್ ಕಳಿಸಲೆಂದೇ ಪ್ರಧಾನಿ ಕಚೇರಿ ಯಾರನ್ನಾದರೂ ನೇಮಿಸಿದೆಯೇ ಎಂಬ ಪ್ರಶ್ನೆಯೂ ಮನಸ್ಸಿಗೆ ಬಾರದೇ ಇರದು.

‘‘ಈ ಸರಕಾರ ಎಲ್ಲವನ್ನೂಜಾಹೀರಾತುಮಯಗೊಳಿಸಿದೆ. ಅದಕ್ಕೆ ಸಾಮಾನ್ಯ ಜನರಬಗ್ಗೆ ಕಾಳಜಿಯಿಲ್ಲ, ಇದರಿಂದ ನನಗೆ ಆಶ್ಚರ್ಯವಿಲ್ಲ. ಇದೆಲ್ಲಾ ಪ್ರಧಾನಿಯ ಗೌರವಕ್ಕೆ ತಕ್ಕುದಲ್ಲ,’’ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹೇಳಿದ್ದಾರೆ.

ಈ ಇಮೇಲ್ ಪಡೆದ ವರದಿಗಾರ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದಾಗ ಅವರನ್ನು ಪ್ರಧಾನಿಯ ‘ಸೋಷಿಯಲ್ ಮೀಡಿಯಾ ಗುರು’ ಎಂದೇ ಕರೆಯಲ್ಪಡುವ ಹಿರೇನ್ ಜೋಷಿಯವರನ್ನು ಸಂಪರ್ಕಿಸಲು ಹೇಳಿ ಒಂದು ದೂರವಾಣಿ ಸಂಖ್ಯೆಯನ್ನು ಅವರಿಗೆ ನೀಡಲಾಯಿತು. ಆದರೆ ಆ ಸ್ಥಿರ ದೂರವಾಣಿ ಕಾರ್ಯನಿರ್ವಹಿಸುತ್ತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News