ಮದ್ಯಪಾನ ವ್ಯಕ್ತಿಯ ಮೂಲಭೂತ ಹಕ್ಕಲ್ಲ: ಹೈಕೋರ್ಟು
ಕೊಚ್ಚಿ,ಜ.19: ಮದ್ಯಪಾನ ಮಾಡುವುದು ಮೂಲಭೂತ ಹಕ್ಕಲ್ಲ ಎಂದು ಕೇರಳ ಹೈಕೋರ್ಟು ತೀರ್ಪು ನೀಡಿದೆ. ಮದ್ಯಬಳಕೆ ವ್ಯಾಪಕ ಅವಗಡಗಳಿಗೆ , ವಿವಾಹವಿಚ್ಛೇದನಗಳಿಗೆ,
ಅಪರಾಧಕೃತ್ಯಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಮದ್ಯ ನಿಯಂತ್ರಣ ಹೇರುವ ಸರಕಾರದ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಮದ್ಯಬಳಕೆಯ ನಿಯಂತ್ರಿಸುವ ಮದ್ಯನೀತಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ಕೋರ್ಟು ತಿಳಿಸಿದೆ. ಪೆರುಂಬಾವೂರ್ ವಳಯಂಚಿರಙರ ಟಾಪಿಂಗ್ ಕಾರ್ಮಿಕ ಎಂ.ಎಸ್. ಅನೂಪ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಹೈಕೋರ್ಟು ಈ ತೀರ್ಪು ನೀಡಿದೆ.
ಕೆಲಸದ ಬಳಿಕ ಸ್ವಲ್ಪ ಮದ್ಯಸೇವನೆ ತನ್ನ ಆಹಾರ ರೀತಿಯಾಗಿದ್ದು ಕೇರಳ ಸರಕಾರದ ಮದ್ಯನೀತಿ ತನ್ನ ಖಾಸಗಿತನಕ್ಕೆ ಹಾಗೂ ಮೂಲಭೂತ ಹಕ್ಕಿನ ಹಸ್ತಕ್ಷೇಪವಾಗಿದೆ ಎಂದು ಅನೂಪ್ ಅರ್ಜಿಯಲ್ಲಿ ವಾದಿಸಿದ್ದರು. ಈಹಿಂದೆ ಮದ್ಯನೀತಿ ಮೂಲಭೂತ ಹಕ್ಕು ಉಲ್ಲಂಘನೆ ಎಂದು ಘೋಷಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟು ಸಿಂಗಲ್ ಬೆಂಚ್ ತಳ್ಳಿಹಾಕಿತ್ತು. ಮದ್ಯನೀತಿಯನ್ನು ಸುಪ್ರೀಂಕೋರ್ಟು ಕೂಡಾ ಸರಿಯೆಂದು ದೃಢಪಡಿಸಿರುವ ಹಿನ್ನೆಲೆಯಲ್ಲಿ ಸಿಂಗಲ್ ಬೆಂಚ್ ಕ್ರಮಕೈಗೊಂಡಿತ್ತು. ನಂತರ ಮದ್ಯಾಸಕ್ತಿಯು ಮೂಲಭೂತ ಹಕ್ಕೆಂದು ತೃಪ್ತಿಪಡಲು ವ್ಯಕ್ತಿಗೆ ಸ್ವಾತಂತ್ರ್ಯ ಕೊಟ್ಟಿಲ್ಲ ಸಾಮಾಜಿಕ ಒಳಿತಿನ ಉದ್ದೇಶಗಳು ವ್ಯಕ್ತಿಯ ಖಾಸಗಿ ಹಕ್ಕು ಸಂರಕ್ಷಣೆಗಿಂತ ಮುಖ್ಯವಾಗಿದೆ. ಮದ್ಯಬಳಕೆ ಖಾಸಗಿತನದ ಭಾಗವಾಗಿದ್ದರೂ ನ್ಯಾಯವಾದ ನಿಯಂತ್ರಣಗಳಿಗೆ ಅಧೀನವಾಗಿದೆ ಎಂದು ಕೋರ್ಟು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ ಎಂದು ವರದಿ ತಿಳಿಸಿದೆ.