ಸೈನಾ ಮುಡಿಗೆ ಮಲೇಷ್ಯಾ ಮಾಸ್ಟರ್ಸ್‌ ಕಿರೀಟ

Update: 2017-01-22 09:21 GMT

ಸರಾವಕ್(ಮಲೇಷ್ಯಾ), ಜ.22: ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್‌ ಗ್ರಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ ಹೊಸ ವರ್ಷವನ್ನು ಟ್ರೋಫಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.

ರವಿವಾರ ಇಲ್ಲಿ ನಡೆದ 120,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸೈನಾ ಅವರು ಥಾಯ್ಲೆಂಡ್‌ನ ಪೊರ್ನ್‌ಪಾವಿ ಚೊಚುವಾಂಗ್‌ರನ್ನು 22-20, 22-20 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ರಿಯೋ ಒಲಿಂಪಿಕ್ಸ್‌ನ ಬಳಿಕ ಮಂಡಿಶಸ್ತ್ರಚಿಕಿತ್ಸೆಗೆ ಒಳಪಟ್ಟ ಬಳಿಕ ಸೈನಾ ಗೆದ್ದಂತಹ ಮೊದಲ ಪ್ರಶಸ್ತಿ ಇದಾಗಿದೆ.

ಫೈನಲ್ ಪಂದ್ಯದಲ್ಲಿ 0-4 ಕಳಪೆ ಆರಂಭದಿಂದ ಬೇಗನೆ ಚೇತರಿಸಿಕೊಂಡ ಸೈನಾ 19ರ ಹರೆಯದ ಚೊಚುವಾಂಗ್‌ರನ್ನು ರೋಚಕವಾಗಿ ಮಣಿಸಿದರು. ಸೈನಾ ಕೊನೆಯ ಬಾರಿ 2016ರ ಜೂನ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿ ಜಯಿಸಿದ್ದರು.

ಮಲೇಷ್ಯಾದಲ್ಲಿ ಭಾರತದ ಆಟಗಾರ್ತಿಯರು ಈ ಹಿಂದೆಯೂ ಉತ್ತಮ ಸಾಧನೆ ಮಾಡಿದ್ದಾರೆ. ಪಿ.ವಿ. ಸಿಂಧು 2013 ಹಾಗೂ 2016ರಲ್ಲಿ ಇಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. ಸೈನಾ 2011ರಲ್ಲಿ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News