ಅಕ್ಕಿ ಬೆಲೆ ಹೆಚ್ಚಳ !
ಕೋಟ್ಟಯಂ,ಜ. 25: ಕೇರಳದಲ್ಲಿ ಸಾರ್ವಜನಿಕ ಮಾರುಕಟ್ಟೆಯಲ್ಲಿ ಅಕ್ಕಿಗೆ ಪುನಃ ಬೆಲೆಹೆಚ್ಚಳವಾಗಿದೆ. ಕಿಲೋ ಒಂದಕ್ಕೆ ನಾಲ್ಕುರೂಪಾಯಿಯಿಂದ ಆರು ರೂಪಾಯಿವರೆಗೂ ಹೆಚ್ಚಳವಾಗಿದ್ದು, ಬಿರಿಯಾನಿ ಅಕ್ಕಿಗೆ 15 ರೂಪಾಯಿ ಹೆಚ್ಚಳವಾಗಿದೆ. ಕೇರಳದಲ್ಲಿ ಹೆಚ್ಚು ಬಳಕೆಯಲ್ಲಿರುವ ಜಯ ಅಕ್ಕಿಗೆ ಕಿಲೊಗೆ ಆರರೂಪಾಯಿ ಹೆಚ್ಚಳವಾಗಿದ್ದರೆ, ಸುರೇಖಾ, ಚಂಪಾ ಅಕ್ಕಿಗೆ ನಾಲ್ಕುರೂಪಾಯಿ ಹೆಚ್ಚಳ ವಾಗಿದೆ . ಜಯ ಮಾರುಕಟ್ಟ ಬೆಲೆ 44-45ರೂ. ಚಂಪಾ, 39-42ರೂ. ಮಾರುಕಟ್ಟೆ ದರವಾಗಿದೆ. ಬೆಳ್ತಿಗೆ ಅಕ್ಕಿಗೂ ಬೆಲೆ ಹೆಚ್ಚಳವಾಗಿದ್ದು, 30-32ರೂಪಾಯಿಗೇರಿದೆ ಎಂದು ವರದಿಯಾಗಿದ.ಎ
ಆಂಧ್ರದಲ್ಲಿ ಬರ ಬಂದಪ್ಪಳಿಸಿದ್ದರಿಂದ ಭತ್ತ ಬೆಳೆಕೊರತೆ ಸಂಭವಿಸಿದೆ. ಆದ್ದರಿಂದ ಅಕ್ಕಿ ಮಾರುಕಟ್ಟೆಗೆ ಸಾಕಷ್ಟು ಪೂರೈಕೆ ಆಗುತ್ತಿಲ್ಲ. ಜೊತೆಗೆ ಕೇರಳದಲ್ಲಿ ಪಡಿತರ ವಿತರಣೆಯಲ್ಲಿ ಚ್ಯುತಿ ಸಂಭವಿಸಿದ್ದು ಅಕ್ಕಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಕೇರಳ ಸರಕಾರದ ಸಾರ್ವಜನಿಕ ವಿತರಣೆಯ ಸಪ್ಲೈಕೊ ತೀವ್ರ ಹಣಕಾಸು ಕೊರತೆ ಅನುಭವಿಸುತ್ತಿದೆ. ಆದ್ದರಿಂದ ಅದು ಸಾರ್ವಜನಿಕ ಮಾರುಕಟ್ಟೆಗೆ ಮಧ್ಯಪ್ರವೇಶಿಸಿಲ್ಲ. ಆದ್ದರಿಂದ ಅಕ್ಕಿ ಸಹಿತ ದಿನಬಳಕೆಯ ವಸ್ತುಗಳಿಗೆ ಶೇ. 20-40ರವರೆಗೆ ಬೆಲೆ ಹೆಚ್ಚಳವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆಂದು ವರದಿ ತಿಳಿಸಿದೆ.