ಭಾರತದ ವಿರುದ್ಧ ಇಂಗ್ಲೆಂಡ್‌ಗೆ 148 ರನ್‌ಗಳ ಗೆಲುವಿನ ಸವಾಲು
Update: 2017-01-26 18:11 IST
ಕಾನ್ಪುರ, ಜ.26: ಭಾರತ ಇಲ್ಲಿ ಆರಂಭಗೊಂಡ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 147 ರನ್ ಗಳಿಸಿದೆ.
ಇಂಗ್ಲೆಂಡ್‌ನ ಮಿಲ್ಸ್(27ಕ್ಕೆ 1), ಜೋರ್ಡನ್ (27ಕ್ಕೆ 1),ಪ್ಲೆಂಕಟ್(32ಕ್ಕೆ1), ಸ್ಟೋಕ್ಸ್(37ಕ್ಕೆ 1) ಮತ್ತು ಮೊಯಿನ್ ಅಲಿ(21ಕ್ಕೆ 2) ದಾಳಿಗೆ ಭಾರತ ತತ್ತರಿಸಿದೆ.
ಮಾಜಿ ನಾಯಕ ಮಹೆಂದ್ರ ಸಿಂಗ್ ಧೋನಿ (ಔಟಾಗದೆ 36) ಪರ್ವೇಝ್ ರಸೂಲ್ (5) ಅವರು 7ನೆ ವಿಕೆಟ್‌ಗೆ 27 ರನ್ ದಾಖಲಿಸಿ ತಂಡದ ಮೊತ್ತವನ್ನು ಏರಿಸಿದರು. ನಾಯಕ ವಿರಾಟ್ ಕೊಹ್ಲಿ(29), ಸುರೇಶ್ ರೈನಾ(34), ಯುವರಾಜ್ ಸಿಂಗ್(12) ಎರಡಂಕೆಯ ಸ್ಕೋರ್ ದಾಖಲಿಸಿದರು. ಕೆ.ಎಲ್. ರಾಹುಲ್(8), ಮನೀಷ್ ಪಾಂಡೆ(3) ಮತ್ತು ಹಾರ್ದಿಕ್ ಪಾಂಡ್ಯ (9) ವಿಫಲರಾಗಿದ್ದಾರೆ.