ಹಿಮದಲ್ಲಿ ಸಿಲುಕಿದ್ದ ಐವರು ಯೋಧರ ರಕ್ಷಣೆ
Update: 2017-01-28 23:55 IST
ಜಮ್ಮು,ಜ.28: ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ ಮಛಿಲ್ ವಿಭಾಗದಲ್ಲಿ ಶನಿವಾರ ಬೆಳಗ್ಗೆ ಹಿಮಮಾರ್ಗದಲ್ಲಿ ನಡೆದುಕೊಂಡು ತಮ್ಮ ನೆಲೆಯತ್ತ ತೆರಳುತ್ತಿದ್ದಾಗ ಹಠಾತ್ತನೆ ಬಾಯಿ ತೆರೆದುಕೊಂಡ ಹಿಮದ ರಾಶಿಯಲ್ಲಿ ಹೂತು ಹೋಗಿದ್ದ 56 ರಾಷ್ಟ್ರೀಯ ರೈಫಲ್ಸ್‌ನ ಐವರು ಯೋಧರನ್ನು ರಕ್ಷಿಸಲಾಗಿದೆ.
ಸುರಿಯುತ್ತಿದ್ದ ಹಿಮದ ನಡುವೆಯೇ ಹಲವಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ತಂಡಗಳು ಅವರನ್ನು ಹಿಮದ ರಾಶಿಯಡಿಯಿಂದ ಜೀವಂತ ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾದವು. ಅಸ್ವಸ್ಥಗೊಂಡಿರುವ ಎಲ್ಲ ಐವರು ಯೋಧರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೋರ್ವರು ತಿಳಿಸಿದರು. ಈ ಅವಘಡ ಸಂಭವಿಸಿದಾಗ ಈ ಯೋಧರು ದೈನಂದಿನ ಕರ್ತವ್ಯದಲ್ಲಿದ್ದರು ಎಂದರು.