×
Ad

ದೇವಾಲಯಕ್ಕೆ ಬೀಫ್ ಎಸೆದ ಪ್ರಕರಣ: ಕೊಲ್ಕತ್ತಾ ಉದ್ವಿಗ್ನ

Update: 2017-01-29 09:07 IST

ಕೊಲ್ಕತ್ತಾ, ಜ.29: ನಗರದ ಪಶ್ಚಿಮ ಭಾಗದ ಮೆಥಿಯಾಬುರ್ಬ್ ಪ್ರದೇಶದಲ್ಲಿ ದೇವಸ್ಥಾನವೊಂದರಲ್ಲಿ ಗೋಮಾಂಸದ ತುಂಡುಗಳನ್ನು ಎಸೆಯಲಾಗಿದೆ ಎಂಬ ಘಟನೆ ಹಿನ್ನೆಲೆಯಲ್ಲಿ ಆರು ದಿನಗಳಿಂದ ಕೊಲ್ಕತ್ತಾ ನಗರ ಉದ್ವಿಗ್ನವಾಗಿಯೇ ಉಳಿದಿದೆ. ಇದುವರೆಗೆ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ.

ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದು, ನಾಲ್ಕು ಅಥವಾ ಹೆಚು ಮಂದಿ ಒಂದು ಪ್ರದೇಶದಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಎರಡು ದೇವಸ್ಥಾನಗಳನ್ನು ಅಪವಿತ್ರಗೊಳಿಸಿದಾಗಿದೆ ಎಂದು ಆಪಾದಿಸಿ ಹಿಂದೂ ಸಂಘಟನೆಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಗಾರಗಳನ್ನೂ ನಿಷೇಧಿಸಲಾಗಿದೆ. ಸರಕಾರಿ ಸ್ವಾಮ್ಯದ ಗಾರ್ಡನ್‌ರೀಚ್ ಶಿಪ್ ಬಿಲ್ಡರ್ಸ್‌ ಮತ್ತು ಇಂಜಿನಿಯರ್ಸ್‌ ಸಂಸ್ಥೆ ಇರುವ ಈ ಪ್ರದೇಶದಲ್ಲಿ ಮುಸ್ಲಿಂ ಬಾಹುಳ್ಯವಿದೆ.

ಈ ಘಟನೆಯನ್ನು ಪ್ರತ್ಯೇಕ ಘಟನೆ ಎಂದು ಪರಿಗಣಿಸುವಂತಿಲ್ಲ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಇಂಥ ಕೋಮುಸೂಕ್ಷ್ಮ ಘಟನೆಗಳು 2016ರ ಅಕ್ಟೋಬರ್ ಬಳಿಕ ನಡೆದಿದ್ದು, ರಾಜ್ಯ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಘಟನೆ ಹಿನ್ನೆಲೆಯಲ್ಲಿ ಯಾವುದೇ ಅರಾಜಕತೆ ಸೃಷ್ಟಿಯಾಗಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಇಂಥ ಪ್ರಕರಣಗಳನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಇಂಥ ಸಂಚುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದು ರಾಜಕೀಯ ಪಕ್ಷ ಹಿಂಸೆ ಪ್ರಚೋದಿಸಲು ಹುನ್ನಾರ ನಡೆಸಿದೆ ಎಂದು ಬಿಜೆಪಿಯ ಹೆಸರು ಹೇಳದೇ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News