ಅಜ್ಜಿಯ ಅಂತಿಮ ಸಂಸ್ಕಾರಕ್ಕೆ ಗ್ರಾಮಸ್ಥರು ಅನುಮತಿ ನಿರಾಕರಿಸಿದ್ದಕ್ಕೆ ಈ ಚಿಂದಿ ಆಯುವವ ಮಾಡಿದ್ದೇನು ನೋಡಿ
ತಿರುಚ್ಚಿ : ಅಮಾನವೀಯತೆಯ ಪರಮಾವಧಿ ಎನ್ನಬಹುದಾದ ಘಟನೆಯೊಂದರಲ್ಲಿವಾಲಡಿ ಸಮೀಪದ ನೆರುಸಲಕುದಿ ಗ್ರಾಮದ ಚಿಂದಿ ಆಯುವ ವ್ಯಕ್ತಿಯೊಬ್ಬನಅಜ್ಜಿ ಮೃತಪಟ್ಟಾಗ ಸ್ಥಳೀಯ ಚರ್ಚಿನ ಆವರಣದಲ್ಲಿ ವೃದ್ಧೆಯ ಕಳೇಬರವನ್ನು ದಫನ ಮಾಡಲು ಅಥವಾ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ನೀಡಲು ಆತನಿಗೆ ಅನುಮತಿಸಿದ ಕಾರಣ ಆತ ಕೊನೆಗೆ ನಿರುಪಾಯನಾಗಿ ಸಾರ್ವಜನಿಕ ಸ್ಥಳವೊಂದರಲ್ಲಿ ತರಗೆಲೆಗಳನ್ನು ಉಪಯೋಗಿಸಿ ಅಜ್ಜಿಯ ಅಂತ್ಯಕ್ರಿಯೆ ನಡೆಸಲು ಯತ್ನಿಸಿದ್ದಾನೆ.
45 ವರ್ಷದ ಮುರುಗೇಶನ್ ಚಿಂದಿ ಆಯುವ ಜತೆ ಆಟಿಕೆಗಳನ್ನು ಕೂಡ ಮಾರಾಟ ಮಾಡುವವನಾಗಿದ್ದು ಕಳೆದ ಬುಧವಾರ ಬೆಳಿಗ್ಗೆ ಆತನ 75 ವರ್ಷದ ಅಜ್ಜಿಮರಿಯಮ್ಮಲ್ ಅವರಿರುವ ಟೆಂಟಿನಲ್ಲಿ ಮೃತಪಟ್ಟಿದ್ದು ಕಂಡು ಬಂದಿತ್ತು. ಆಕೆಕಳೆದ ಕೆಲ ದಿನಗಳಿಂದ ಅಸೌಖ್ಯದಿಂದಿದ್ದಳಲ್ಲದೆ ಚಳಿಯ ವಾತಾವರಣದಿಂದಾಗಿ ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.
ಆಕೆ ಮೃತಪಟ್ಟಾಗ ಮುರುಗೇಶನ್ ತನ್ನ ಹುಟ್ಟೂರು ವೆಲಂಕಣಿಗೆ ಕಳೇಬರವನ್ನು ಕೊಂಡು ಹೋಗುವುದು ಕಷ್ಟವೆಂದು ಅರಿತು ಸ್ಥಳೀಯ ಚರ್ಚನ್ನು ಸಂಪರ್ಕಿಸಿ ಶವಸಂಸ್ಕಾರಕ್ಕೆ ಅನುಮತಿ ಕೇಳಿದಾಗಆತನಿಗೆ ಅನುಮತಿ ನಿರಾಕರಿಸಲಾಗಿತ್ತು. ನಂತರ ಹಳ್ಳಿಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಿದರೂ ಗ್ರಾಮಸ್ಥರು ಆತನಿಗೆ ಅವಕಾಶ ನಿರಾಕರಿಸಿದರು. ಕೊನೆಗೆ ಆತ ಸಾರ್ವಜನಿಕ ಸ್ಥಳವೊಂದರಲ್ಲಿ ಚಿತೆಗೆ ಅಗ್ನಿಸ್ಪರ್ಶ ನೀಡಿದಾಗ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವುದರೊಳಗಾಗಿ ಹೆಣ ಅರ್ಧದಷ್ಟು ಸುಟ್ಟಿತ್ತು. ಕೊನೆಗೆ ಪೊಲೀಸರುವೃದ್ಧೆಯ ಅಂತ್ಯಸಂಸ್ಕಾರಕ್ಕೆ ಏರ್ಪಾಟು ನಡೆಸಿದರು.