ನಗದು ವ್ಯವಹಾರ ಮಿತಿ 3 ಲಕ್ಷ ರೂ.

Update: 2017-02-01 09:14 GMT

ಹೊಸದಿಲ್ಲಿ, ಫೆ.1: ಮುಂಬರುವ ಎಪ್ರಿಲ್‌ 1ರಿಂದ ರೂಪಾಯಿ  3 ಲಕ್ಷ ರೂ. ತನಕ ಮಾತ್ರ ನಗದು ವ್ಯವಹಾರಕ್ಕೆ ಅವಕಾಶ ಇರುತ್ತದೆ. ಅದಕ್ಕಿಂತ ಹೆಚ್ಚಿನ ವಹಿವಾಟನ್ನು ನಗದು ಮೂಲಕ ಮಾಡುವುದನ್ನು ನಿಷೇಧಿಸಲಾಗಿದೆ  ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್‌ ಮಂಡಿಸಿದ ಸಚಿವ ಅರುಣ್ ಜೇಟ್ಲಿ ಅವರು ಕಪ್ಪು ಹಣವನ್ನು ನಿಯಂತ್ರಿಸಲು  ಸುಪ್ರೀಂ ಕೋರ್ಟ್‌‌ನ ವಿಶೇಷ ತನಿಖಾ ತಂಡ(ಎಸ್ ಐಟಿ) ನೀಡಿರುವ ಶಿಫಾರಸಿನಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಎಂ.ಬಿ ಶಾಹ್‌ ನೇತೃತ್ವದ ಸಮಿತಿಯು ಕಳೆದ ಜುಲೈನಲ್ಲಿ ಕಪ್ಪು ಹಣದ ನಿಯಂತ್ರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌‌ಗೆ ಸಲ್ಲಿಸಿರುವ  5ನೆ ವರದಿಯಲ್ಲಿ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News