×
Ad

ಹುರುಳಿಲ್ಲದ ಬಜೆಟ್: ಮಮತಾ ಬ್ಯಾನರ್ಜಿ

Update: 2017-02-01 15:36 IST

ಕೋಲ್ಕತಾ, ಫೆ.1: ಕೇಂದ್ರ ಬಜೆಟ್ ಹೃದಯವೇ ಇಲ್ಲದ, ಟೊಳ್ಳು ಮಾತುಗಳಿಂದ ತುಂಬಿರುವ ಬಜೆಟ್ ಆಗಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಸಂಸತ್‌ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಸತತ ಟ್ವೀಟ್ ಮಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ, ನಗದು ಹಿಂಪಡೆಯುವಿಕೆಯ ಮೇಲೆ ಹೇರಲಾಗಿರುವ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಬೇಕು. ನವೆಂಬರ್‌ನಲ್ಲಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ನಿಷೇಧ ಬಳಿಕ ಎಷ್ಟು ಕಾಳ ಧನ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಅಂಕಿ-ಅಂಶವನ್ನು ನೀಡಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

‘‘ಸರಕಾರದಿಂದ ದೇಶದ ಭವಿಷ್ಯದ ಬಗ್ಗೆ ಯಾವುದೇ ಮಾರ್ಗದರ್ಶನವಿಲ್ಲ. ಬಜೆಟ್ ವಿಶ್ವಾಸಾರ್ಹತೆ ಕಳೆದುಕೊಂಡಿದೆ... ಇದೊಂದು ಹುರುಳಿಲ್ಲದ, ಅನುಪಯುಕ್ತ, ಯಾಂತ್ರಿಕರಹಿತ, ಕ್ರಮರಹಿತ, ಹೃದಯವಿಲ್ಲದ ಬಜೆಟ್ ಆಗಿದೆ’’ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

ಬಜೆಟ್‌ನಲ್ಲಿ ಸಾಕಷ್ಟು ವಿಷಯಗಳನ್ನು ಪ್ರಸ್ತಾವಿಸಲಾಗಿದೆ. ಆದರೆ, ಯಾವುದಕ್ಕೂ ಪರಿಹಾರವನ್ನು ನೀಡಲಾಗಿಲ್ಲ. ವಿತ್ತ ಸಚಿವರು ತೆರಿಗೆ ಪಾಲನೆ ಕೊರತೆ ಬಗ್ಗೆ ಮಾತನಾಡಿದ್ದಾರೆ. ಆದರೆ, ಶಿಸ್ತುಕ್ರಮದ ಬಗ್ಗೆ ಏನೂ ಮಾತನಾಡಿಲ್ಲ. ಕಾರ್ಪೋರೆಟ್ ಸೆಕ್ಟರ್‌ಗಳಲ್ಲಿ ತೆರಿಗೆ ಪಾಲನೆಯನ್ನು ಹೇಗೆ ಹೆಚ್ಚಿಸಲಿದೆ ಎಂಬ ಸರಕಾರದ ಬಳಿ ಉತ್ತರವಿಲ್ಲ. ಖಾಸಗಿ ಬಂಡವಾಳದ ಜಡತ್ವದ ಬಗ್ಗೆ ಸರಕಾರ ಪ್ರಸ್ತಾವಿಸಿದೆ. ಆದರೆ, ಉದ್ಯೋಗ ಸೃಷ್ಟಿಸುವ ಬಗ್ಗೆ ಯಾವುದೇ ಮಾರ್ಗದರ್ಶನವಿಲ್ಲ ಎಂದು ಸಿಪಿಐ(ಎಂ) ಮುಖಂಡ ಮುಹಮ್ಮಸ್ ಸೆಲಿಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News