×
Ad

ಕೊಲೆಯಾದ ಟೆಕ್ಕಿ ರಸೀಲಾ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ

Update: 2017-02-01 17:30 IST

 ಪುಣೆ,ಫೆ.1: ಪುಣೆ ಇನ್ಫೋಸಿಸ್‌ನಲ್ಲಿ ಕೊಲೆಯಾದ ರಸೀಲಾರ ಸಂಬಂಧಿಕರಿಗೆ ಒಂದು ಕೋಟಿ ರೂಪಾಯಿ ನಷ್ಟಪರಿಹಾರ ಹಾಗೂ ಒಬ್ಬನಿಗೆ ಕೆಲಸ ಕೊಡುವುದಾಗಿ ಕಂಪೆನಿ ಹೇಳಿದೆ. ರಸೀಲಾ ಕೊಲೆಯಾದ ಸುದ್ದಿ ತಿಳಿದು ಪುಣೆಗೆ ಬಂದಿದ್ದ ಸಂಬಂಧಿಕರಿಗೆ ಇನ್ಫೋಸಿಸ್ ಅಧಿಕಾರಿಗಳು ನಷ್ಟಪರಿಹಾರ ಮೊತ್ತ ಹಾಗೂ ಕೆಲಸವನ್ನು ನೀಡುವುದಾಗಿ ಬರವಣಿಗೆ ಮೂಲಕ ತಿಳಿಸಿದ್ದಾರೆ. ಪೋಸ್ಟ್ ಮಾರ್ಟಂ ಮುಗಿದ ಬಳಿಕ ಮಂಗಳವಾರ ಬೆಳಗ್ಗೆ ಮೃತದೇಹದೊಂದಿಗೆ ಸಂಬಂಧಿಕರು ಊರಿಗೆ ಮರಳಿದ್ದರು.

ಕಂಪ್ಯೂಟರ್ ವಯರ್ ಕೊರಳಿಗೆ ಸುತ್ತುವ ಮೂಲಕ ರಸೀಲಾರ ಹತ್ಯೆಯಾಗಿದೆ ಎಂದು ಪೋಸ್ಟ್‌ಮಾರ್ಟಂ ವರದಿಯಲ್ಲಿದ್ದರೂ ರಸೀಲಾರ ಮುಖ ವಿಕೃತಗೊಳಿಸಲಾಗಿದೆ. ಮುಖದ ಒಂದುಭಾಗ ಸಂಪೂರ್ಣ ಹಾನಿಗೊಂಡಿದೆ. ಆದ್ದರಿಂದ ಒಬ್ಬನಿಂದ ಈ ಕೊಲೆ ನಡೆದಿಲ್ಲ.

ಪ್ರಕರಣ ನಿಗೂಢವಾಗಿದೆಎಂದು ರಸೀಲಾರ ತಂದೆ ರಾಜು ಪೊಲೀಸರಿಗೆ ತಿಳಿಸಿದ್ದಾರೆ.

ಸೋಮವಾರ ಸಂಜೆ ರಸೀಲಾರ ತಂದೆ ರಾಜು, ಚಿಕ್ಕಪ್ಪ ವಿನೋದ್‌ಕುಮಾರ್, ಮಾವ ಸುರೇಶ್ ಪುಣೆಗೆ ತಲುಪಿದ್ದರು. ನಂತರ ಇನ್ಫೋಸಿಸ್ ಅಧಿಕಾರಿಗಳ ಜೊತೆ ರಸೀಲಾರ ಕೊಲೆ ನಡೆದಿದ್ದ ಕಂಪೆನಿಯ ಒಂಬತ್ತನೆ ಮಹಡಿಕೋಣೆ ಸಂದರ್ಶಿಸಿದ್ದಾರೆ. ಕೊಲೆನಡೆದ ಸ್ಥಳ ತೋರಿಸದೆ ಮೃತದೇಹ ಪಡೆಯಲಾರೆವು ಎಂದು ಸಂಬಂಧಿಕರು ಹೇಳಿದ್ದರಿಂದ ಇನ್ಫೋಸಿಸ್ ಅಧಿಕಾರಿಗಳು ಕೊಲೆ ನಡೆದ ಸ್ಥಳವನ್ನು ಅವರಿಗೆ ತೋರಿಸಿದ್ದಾರೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News