ನಕಲಿ ಫೇಸ್ಬುಕ್ ಅಕೌಂಟ್ ನಿಂದ ವಿದ್ಯಾರ್ಥಿನಿಯರೊಂದಿಗೆ ಚಾಟ್ : ಸೈಬರ್‌ಸೆಲ್‌ಗೆ ದೂರು

Update: 2017-02-01 12:58 GMT

ಮನಾಮ,ಫೆ.1: ಇಂಡಿಯನ್ ಸ್ಕೂಲ್ ವಿದ್ಯಾರ್ಥಿನಿಯರನ್ನು ಗುರಿಯಾಗಿಟ್ಟು ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ ಚಾಟ್ ನಡೆಸಲಾಗುತ್ತಿದ್ದು, ಇದರ ವಿರುದ್ಧ ಸ್ಕೂಲ್ ಅಧಿಕಾರಿಗಳು ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ.

ಕಳೆದ ಕೆಲವು ದಿವಸಗಳಿಂದ ಇಂಡಿಯನ್ ಸ್ಕೂಲ್ ಅಧ್ಯಾಪಕಿ ಎಂಬ ಹೆಸರಿನಲ್ಲಿ ಪ್ರೊಫೈಲ್ ಸೃಷ್ಟಿಸಿ ವಿದ್ಯಾರ್ಥಿನಿಗಳೊಂದಿಗೆ ಚಾಟ್ ಮೆಸೇಜ್‌ಗಳು ಬಂದಿವೆ. ಅವುಗಳಲ್ಲಿ ಹಲವು ಅಸಭ್ಯ ಮೆಸೇಜ್‌ಗಳು ಚಾಟ್‌ಗಳಾಗಿದ್ದವು ಎನ್ನಲಾಗಿದೆ.

ಹೊಸದಾಗಿ ಸ್ಕೂಲ್‌ಗೆ ಸೇರಿದ ಅಧ್ಯಾಪಕಿ ಎಂದು ಪರಿಚಯಿಸಿಕೊಂಡು ವಿದ್ಯಾರ್ಥಿನಿಯರೊಡನೆ ಚಾಟ್ ಮಾಡಲಾಗಿದೆ. ಅಧ್ಯಾಪಕಿ ಎಂದಾದ್ದರಿಂದ ವಿದ್ಯಾರ್ಥಿನಿಯರು ಪ್ರತಿಕ್ರಿಯಿಸಿದ್ದರು. ಅಧ್ಯಾಪಕಿಯರ ವಿರುದ್ಧವೂ ವಿಮರ್ಶೆಗಳು ಚಾಟ್‌ನಲ್ಲಿವೆ.

ಹೆಚ್ಚಿನವಿವರ ಕೇಳಿದಾಗ ಚಾಟ್ ಮಾಡುತ್ತಿದ್ದ ವ್ಯಕ್ತಿ ತಪ್ಪಿಸಿಕೊಳ್ಳುತ್ತಿದ್ದರು. ಮಕ್ಕಳು ಸೋಶಿಯಲ್ ಮೀಡಿಯ ಬಳಸುವಾಗ ಹೆತ್ತವರು ಅಗತ್ಯ ಎಚ್ಚರಿಕೆ ಪಾಲಿಸಬೇಕೆಂದು ಇಂಡಿಯನ್ ಸ್ಕೂಲ್ ಚೇರ್‌ಮೆನ್ ಪ್ರಿನ್ಸ್ ನಟರಾಜನ್ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News