×
Ad

ಚಳಿಯಿಂದ ಥರಗುಡುತ್ತಿರುವ ಕಾಶ್ಮೀರ

Update: 2017-02-10 23:44 IST

ಶ್ರೀನಗರ, ಫೆ.10: ಕಾಶ್ಮೀರ ಚಳಿಯಿಂದ ಥರಗುಡುತ್ತಿದೆ. ಗುರುವಾರ ರಾತ್ರಿ ಉಷ್ಣಾಂಶ ಶೂನ್ಯಕ್ಕಿಂತ ಇನ್ನೂ ಕೆಳಕ್ಕಿಳಿದಿದ್ದು, ಕಾರ್ಗಿಲ್‌ನಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ಮೈನಸ್ 15.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಾಶ್ಮೀರದ ಹೆಚ್ಚಿನ ಸ್ಥಳಗಳಲ್ಲಿ ಹಗಲಿನ ವೇಳೆ ಗರಿಷ್ಠ ಉಷ್ಣಾಂಶ ಕಳೆದ ವರ್ಷದ ಈ ಸಮಯಕ್ಕೆ ಹೋಲಿಸಿದರೆ ಸಾಮಾನ್ಯಕ್ಕಿಂತ ಹೆಚ್ಚಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಶ್ರೀನಗರದಲ್ಲಿ ಗುರುವಾರ ರಾತ್ರಿ ಕನಿಷ್ಠ ಉಷ್ಣಾಂಶ ಹಿಂದಿನ ರಾತ್ರಿಯ ಮೈನಸ್ 1.2 ಡಿ.ಸೆ.ನಿಂದ ಕುಸಿದು ಮೈನಸ್ 3 ಡಿ.ಸೆ.ಗೆ ತಲುಪಿತ್ತು. ಹಗಲು ಗರಿಷ್ಠ ಉಷ್ಣಾಂಶ 11.8 ಡಿ.ಸೆ.ಆಗಿತ್ತು. ದ.ಕಾಶ್ಮೀರದ ಪಹಲ್ಗಾಮ್‌ನಲ್ಲಿ ಬುಧವಾರ ರಾತ್ರಿ ಮೈನಸ್ 5.4 ಡಿ.ಸೆ.ಉಷ್ಣಾಂಶವಿದ್ದರೆ ಕಳೆದ ರಾತ್ರಿ ಮೈನಸ್ 9.2 ಡಿ.ಸೆ.ಗೆ ಇಳಿದಿತ್ತು.
ಗುಲ್ಮಾರ್ಗ್, ಕಾಜಿಗುಂದ, ಕುಪ್ವಾರಾಗಳಲ್ಲಿಯೂ ಉಷ್ಣಾಂಶ ಶೂನ್ಯಕ್ಕಿಂತ ಕೆಳಗಿದೆ. ಲಡಾಖ್ ಪ್ರದೇಶದ ಲೇಹ್ ಪಟ್ಟಣದಲ್ಲಿ ನಿನ್ನೆ ಮೈನಸ್ 14.7 ಡಿ.ಸೆ.ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಮುಂದಿನ ವಾರವೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News