ರೋಹಿಂಗ್ಯನ್ನರ ನೆರವಿಗಾಗಿ ಬಾಂಗ್ಲಾದೇಶಕ್ಕೆ ಬಂದ ಮಲೇಶ್ಯಾದ ಹಡಗು
Update: 2017-02-14 16:29 IST
ಢಾಕ,ಸೆ. 14: ಮ್ಯಾನ್ಮಾರ್‌ನಿಂದ ನಿರಾಶ್ರಿತರಾಗಿ ಬಾಂಗ್ಲಾದೇಶಕ್ಕೆ ಬಂದಿರುವ ರೋಹಿಂಗ್ಯನ್ನರಿಗೆ ಸಹಾಯ ನೀಡುವ ಸಲುವಾಗಿ ಮಲೇಶ್ಯಾದ ಹಡಗು ಬಾಂಗ್ಲಾದೇಶಕ್ಕೆ ಬಂದು ತಲುಪಿದೆ. ಕರಾವಳಿ ಜಿಲ್ಲೆಯಾದ ಕೋಕ್ಸ್ ಬಝಾರ್‌ನ ಸೋನಾಡಿಯ ದ್ವೀಪದ ಸಮೀಪ ಅದು ಡಂಗುರ ಹಾಕಿದೆ. ಹಡಗನ್ನು ಬಾಂಗ್ಲಾದೇಶದ ಅಧಿಕಾರಿಗಳು ಸ್ವಾಗತಿಸಿದರೆಂದು ಸೇನಾ ವಕ್ತಾರ ಶಹೀನುಲ್ ಇಸ್ಲಾಂ ಹೇಳಿದ್ದಾರೆ.
ರೋಹಿಂಗ್ಯನ್ನರು ವಾಸವಿರುವ ಟೆಕ್ನೋಫ್‌ಗೆ ಹಡಗಿನ ಸರಕುಗಳನ್ನು ರಸ್ತೆಯ ಮೂಲಕ ತಲುಪಿಸುವ ಕಾರ್ಯಕೈಗೊಳ್ಳಲಾಗುತ್ತಿದೆ. ಟೆಕ್ನಾಫ್‌ನ ಕ್ಯಾಂಪ್‌ಗಳಲ್ಲಿ ಸಾವಿರಾರು ರೋಹಿಂಗ್ಯನ್ನರನ್ನು ಇರಿಸಲಾಗಿದೆ. ಕಳೆದ ಹತ್ತುವರ್ಷಗಳಿಂದೀಚೆಗೆ ಮೂರು ಲಕ್ಷದಷ್ಟು ರೋಹಿಂಗ್ಯನ್ನರು ಬಾಂಗ್ಲಾದೇಶದಲ್ಲಿ ವಾಸವಿದ್ದಾರೆ. ಬುದ್ಧ ಬಹುಸಂಖ್ಯಾತ ದೇಶ ಮ್ಯಾನ್ಮಾರ್‌ನಲ್ಲಿ ಸೈನಿಕರು ಮತ್ತು ಬಲಪಂಥೀಯ ಬುದ್ಧಿಸ್ಟ್‌ಗಳ ದಾಳಿಯಿಂದ ಬಾಂಗ್ಲಾದೇಶಕ್ಕೆ 66,000 ಮಂದಿ ಪಲಾಯನ ಮಾಡಿ ಬಂದಿದ್ದಾರೆಂದು ವರದಿ ತಿಳಿಸಿದೆ.