×
Ad

ಸಿನೆಮಾ ನಟ ಬಾಬುರಾಜ್‌ಗೆ ಇರಿತ

Update: 2017-02-14 16:35 IST

ಅಡಿಮಾಲಿ, ಫೆ.14: ನಟ ಬಾಬುರಾಜ್‌ರ ಎದೆಗೆ ಇರಿಯಲಾಗಿದೆ. ಕಲ್ಲಾರ್ ಕಂಬಿಲೈನ್‌ನ ಬಾಬುರಾಜ್ ಮಾಲಕತ್ವದ ರಿಸಾರ್ಟ್‌ನಲ್ಲಿ ಘಟನೆ ನಡೆದಿದೆ. ಕೊಳದ ನೀರನ್ನು ಬತ್ತಿಸುವುದಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಗಳಾದ ಕೆಲವರೊಂದಿಗೆ ನಡೆದ ವಾಗ್ವಾದದ ವೇಳೆ ಒಬ್ಬ ವ್ಯಕ್ತಿ ಕುಡುಗೊಲಿನಿಂದ ಬಾಬುರಾಜ್‌ರನ್ನು ಇರಿದಿದ್ದಾನೆ.

   ಸಮೀಪದ ನಿವಾಸಿಗಳು ಈ ಕೊಳದಿಂದಲೇ ಬೇಸಗೆಯಲ್ಲಿ ನೀರು ಉಪಯೋಗಿಸುತ್ತಿದ್ದರು. ಆದರೆ ಈ ಕೊಳವನ್ನು ಬತ್ತಿಸಲು ಬಾಬು ರಾಜ್ ತೀರ್ಮಾನಿಸಿದ್ದರು. ಇದನ್ನು ವಿರೋಧಿಸಿ ಸಮೀಪದ ನಿವಾಸಿಗಳು ಒಗ್ಗೂಡಿದ್ದರು. ಇರಿತದಿಂದ ಬಾಬುರಾಜ್‌ರ ಎದೆಯ ಎಡಭಾಗಕ್ಕೆ ಗಾಯವಾಗಿದೆ. ಅಡಿಮಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಕೊಚ್ಚಿಯ ರಾಜಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News