×
Ad

ಸಂಜೆ ವೇಳೆ ಜೈಲು ಸೇರಲಿರುವ ಶಶಿಕಲಾ

Update: 2017-02-15 14:05 IST

ಬೆಂಗಳೂರು, ಫೆ.15: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ ಇಂದು ಸಂಜೆ ವೇಳೆಗೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
ಪರಪ್ಪನ ಅಗ್ರಹಾರದ ಬಳಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಕ್ಕೆ ಶರಣಾದ ಬಳಿಕ ಶಶಿಕಲಾ ಅವರ ಆರೋಗ್ಯ ತಪಾಸಣೆ ಮಾಡಲಾಗುವುದು. ಜೈಲು ಪ್ರವೇಶಿಸಿದ ಬಳಿಕ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಗೆ ಕೈದಿ ನಂಬ್ರ ನೀಡಲಾಗುವುದು. ಸಾಮಾನ್ಯ ಕೈದಿಗಳಂತೆ  ಶಶಿಕಲಾ ಸೇರಿದಂತೆ ಮೂವರು ಸೆರೆವಾಸ ಅನುಭವಿಸಲಿದ್ದಾರೆ.

ಚೆನ್ನೈನಿಂದ ಹೊರಟ ಶಶಿಕಲಾ ಕಾರ್ ನ ಹಿಂದೆ 10 ಕಾರುಗಳು ಹಿಂಬಾಲಿಸಿದೆ. ಅವರ ಹಿಂದೆ ಕಾರ್ ನಲ್ಲಿ ಏಕಮಾತ್ರ ಎಂಎಲ್ಎ ಇದ್ದಾರೆ. ಅವರು ವಿ.ಕೆ. ರವಿ. ಉಳಿದ ಎಲ್ಲ ಶಾಸಕರಿಗೂ ತನ್ನೊಂದಿಗೆ ಬಾರದಿರುವಂತೆ ಶಶಿಕಲಾ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಶಶಿಕಲಾ ಜೈಲುವಾಸ ಅನುಭವಿಸಲಿರುವ ಪರಪ್ಪನ ಅಗ್ರಹಾರ ಜೈಲಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆಗ್ನೇಯ ವಿಭಾಗದ  ಡಿಸಿಪಿ ಡಾ.ಬೋರಲಿಂಗಯ್ಯ ಅವರು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News