ಶಶಿಕಲಾ, ಪಳನಿಸ್ವಾಮಿ ವಿರುದ್ಧ ರೆಸಾರ್ಟ್‌ನಲ್ಲಿ ಶಾಸಕರನ್ನು ಕೂಡಿ ಹಾಕಿದ ಆರೋಪ
ಚೆನ್ನೈ, ಫೆ.15: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ನಟರಾಜನ್ ಮತ್ತು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಪಳನಿ ಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಾಗಿದ್ದು, ಸ್ವತಃ ಎಐಎಡಿಎಂಕೆಯ ಶಾಸಕ ಶರವಣನ್ ಕೂವತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಕೆ ಶಶಿಕಲಾ ಮತ್ತು ಎಡಪಾಡಿ ಪಳನಿ ಸ್ವಾಮಿ ಅವರು ತಮ್ಮ ಬೆಂಬಲಿಗರ ನೆರವಿನಿಂದ ಬಲವಂತವಾಗಿ ತನ್ನನ್ನು ಕಾಂಚಿಪುರಂನ ಕೊವತ್ತೂರಿನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್ ಗೆ ಎಳೆದೊಯ್ದಿದ್ದರು. ಅಲ್ಲಿ ತಮ್ಮನ್ನು ಬಲವಂತವಾಗಿ ಕೂಡಿ ಹಾಕಲಾಗಿತ್ತು ಎಂದು ದೂರಿ ನೀಡಿದ್ದಾರೆ.
ವಿಕೆ ಶಶಿಕಲಾ ಮತ್ತು ಎಡಪ್ಪಾಡಿ ಪಳನಿ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 342, 343, 353, 365, 506/1ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ವಿಚಾರಣೆಗೆ ತೆರಳಿದ ಕಾಂಚಿಪುರಂ ಪೊಲೀಸರಿಗೆ ವಿಚಾರಣೆಗೆ ಪಕ್ಷದ ಮುಖಂಡರು ಅಡ್ಡಿಪಡಿಸಿದರೆ ಎಂದು ತಿಳಿದು ಬಂದಿದೆ.