ಮಾರ್ಗ ಸೂಚಕ ಫಲಕಗಳು ದಿಕ್ಕು ತಪ್ಪಿಸುತ್ತಿವೆ....!

Update: 2017-02-16 18:28 GMT

ಮಾನ್ಯರೆ,
ಮಾರ್ಗ ಸೂಚಕ ಫಲಕಗಳು, ವಿಳಾಸ ಹುಡುಕಿಕೊಂಡು ಬರುವವರಿಗೆ ಬೇಕಾದ ವಿಳಾಸ ಪತ್ತೆ ಹಚ್ಚಲು ಸಹಕಾರಿಯಾಗುತ್ತವೆ. ಆದರೆ ಉಡುಪಿ ನಗರದ ಸುತ್ತ ಮುತ್ತಲಿರುವ ಮಾರ್ಗಸೂಚಕ ಫಲಕದ ಬರಹಗಳು ಮಳೆಗಾಲದಲ್ಲಿ ಕಟ್ಟಿದ ಪಾಚಿಗೆ ಅಳಿಸಿ ಹೋಗಿವೆೆ. ಜಾಹೀರಾತುದಾರರಿಗೆ ಭಿತ್ತಿಪತ್ರ ಕರಪತ್ರ ಅಂಟಿಸುವ ಫಲಕಗಳಾಗಿವೆ. ಕೆಲವು ಕಡೆ ಫಲಕಗಳು ಮುರಿದು ಬಿದ್ದಿವೆ.

ಇದರಿಂದಾಗಿ ವಿಳಾಸ ಹುಡುಕಿಕೊಂಡು ಬರುವ ಸಾರ್ವಜನಿಕರು ದಾರಿ ತಪ್ಪುತ್ತಿದ್ದು, ವಿಳಾಸ ಹುಡುಕಲು ಶ್ರಮ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.
ಸಮಸ್ಯೆಯನ್ನು ಗಮನಿಸಿ ಉಡುಪಿ ನಗರಾಡಳಿತ ನಗರದ ಪ್ರತೀ ವಾರ್ಡುಗಳ ಮಾರ್ಗ ಸೂಚಕ ಫಲಕಗಳಿಗೆ ಬಣ್ಣ ಬಳಿದು ಮಾರ್ಗ ಸೂಚಕ ಹೆಸರುಗಳನ್ನು ಬರೆಯಬೇಕಾಗಿದೆ. ಜಾಹೀರಾತುದಾರರು ಫಲಕಗಳಿಗೆ ಭಿತ್ತಿಪತ್ರ, ಕರಪತ್ರಗಳನ್ನು ಅಂಟಿಸದಂತೆ ಸೂತ್ತೋಲೆ ಹೊರಡಿಸಬೇಕಾಗಿದೆ.

Writer - -ತಾರಾನಾಥ್ ಮೇಸ್ತ, ಶಿರೂರು

contributor

Editor - -ತಾರಾನಾಥ್ ಮೇಸ್ತ, ಶಿರೂರು

contributor

Similar News