ಅಕ್ರಮ ಚಿನ್ನ ವಶ:ಸೌದಿ ಪ್ರಜೆ ಸೆರೆ

Update: 2017-02-17 09:47 GMT

ಮುಂಬೈ,ಫೆ.17: ಇಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ಸಿಬ್ಬಂದಿಯೋರ್ವನನ್ನು ಬಂಧಿಸಿರುವ ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಆತ ಅಕ್ರಮವಾಗಿ ಸಾಗಿಸುತ್ತಿದ್ದ 2,100 ಗ್ರಾಂ.ಚಿನ್ನವನ್ನು ವಶಪಡಿಸಿ ಕೊಂಡಿದ್ದಾರೆ.

ಶುಕ್ರವಾರ ನಸುಕಿನಲ್ಲಿ ಜಿದ್ದಾದಿಂದ ಆಗಮಿಸಿದ ವಿಮಾನದಲ್ಲಿ ಬಂದಿಳಿದಿದ್ದ ಸೌದಿ ಅರೇಬಿಯಾದ ಪ್ರಜೆ ಗೋಯಾ ಅಹ್ಮದ್ ಸಿರಾಜ್‌ನನ್ನು ತಪಾಸಣೆಗೊಳಪಡಿಸಿದಾಗ ಆತನ ಜೀನ್ಸ್ ಪ್ಯಾಂಟಿನ ಜೇಬುಗಳಲ್ಲಿ ತಲಾ 1,000 ಗ್ರಾಂ ತೂಕದ ಎರಡು ಚಿನ್ನದ ಗಟ್ಟಿಗಳು ಮತ್ತು 100 ಗ್ರಾಂ ತೂಕದ ಒಂದು ಚಿನ್ನದ ಗಟ್ಟಿ ಪತ್ತೆಯಾಗಿದ್ದು, ಇವುಗಳ ವೌಲ್ಯ 63.71 ಲ.ರೂ.ಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದರು. ಸಿರಾಜ್ ಸೌದಿ ಏರ್‌ಲೈನ್ಸ್‌ನಲ್ಲಿ ಗ್ರೌಂಡ್ ಸರ್ವಿಸ್ ಸಿಬ್ಬಂದಿಯಾಗಿದ್ದಾನೆ.

ವಶಪಡಿಸಿಕೊಳ್ಳಲಾಗಿರುವ ಚಿನ್ನದಲ್ಲಿ 2,000 ಗ್ರಾಂ ಚಿನ್ನ ತನಗೆ ಸೇರಿದ್ದು, 100 ಗ್ರಾಂ ಚಿನ್ನ ತನ್ನ ಸೋದರ ಸಂಬಂಧಿ ಸೌದಿಯ ಫಾಹಿದ್ ಅಲಿಗೆ ಸೇರಿದ್ದು ಎಂದು ಸಿರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News