ಉ.ಪ್ರ: 3ನೇ ಹಂತದಲ್ಲಿ ಶೇ.61.16 ಮತದಾನ
Update: 2017-02-19 23:02 IST
ಲಕ್ನೋ,ಫೆ.10: ಉತ್ತರ ಪ್ರದೇಶ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ರವಿವಾರ ನಡೆದಿದ್ದು, ಶೇ.61.16ಕ್ಕೂ ಅಧಿಕ ಮತದಾನ ದಾಖಲಾಗಿದೆ. ಆಡಳಿತ ಸಮಾಜವಾದಿ ಪಕ್ಷದ ಪಾಲಿಗೆ ನಿರ್ಣಾಯಕವೆನ್ನಲಾಗಿರುವ 69 ಮತಕ್ಷೇತ್ರಗಳಲ್ಲಿ ಕಣಕ್ಕಳಿದಿದ್ದ 826 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ನಿರ್ಧರಿಸಿದ್ದಾನೆ.
ಸಂಜೆ ಐದು ಗಂಟೆಯವರೆಗೆ ಶೇ.61.16 ಮತದಾನವಾಗಿದ್ದು, ಇನ್ನೂ ಬಹಳಷ್ಟು ಜನರು ಸರದಿ ಸಾಲುಗಳಲ್ಲಿದ್ದರು. ಈ ಹಿನ್ನೆಲೆಯಲ್ಲಿ ಮತದಾನದ ಅಂತಿಮ ಅಂಕಿಅಂಶ ಇನ್ನಷ್ಟು ಹೆಚ್ಚಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಟಿ.ವೆಂಕಟೇಶ ಅವರು ಇಲ್ಲಿ ತಿಳಿಸಿದರು.