ಎತ್ತಿನ ಹೊಳೆ: ಹೋರಾಟ ಎಲ್ಲಿ ಹೋಯಿತು?

Update: 2017-02-19 18:23 GMT

ಮಾನ್ಯರೆ,

ಇತ್ತೀಚೆಗೆ ಕಂಬಳದ ಕಾವಿನ ಮಧ್ಯೆ ಎತ್ತಿನ ಹೊಳೆ ಯೋಜನೆಯ ವಿರುದ್ಧದ ಹೋರಾಟ ನನೆಗುದಿಗೆ ಬಿದ್ದಿದೆ. ಕರಾವಳಿಯಲ್ಲಿ ಈ ಯೋಜನೆಯ ವಿರುದ್ಧದ ನೇತೃತ್ವ ವಹಿಸಿದ್ದ ಕೆಲವರು ನಿಗೂಢ ವೌನವಹಿಸಿದ್ದಾರೆ. ಕೆಲವು ಭ್ರಷ್ಟ ಶಕ್ತಿಗಳು ಅವರನ್ನು ಬಾಯಿ ಮುಚ್ಚಿಸಿವೆ ಎಂಬ ಅನುಮಾನಗಳಿವೆ. ಇನ್ನೂ ಬೇಸಿಗೆ ಆರಂಭವಾಗಿಲ್ಲ. ಅಷ್ಟರಲ್ಲೇ ಕರಾವಳಿಯಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ. ನಗರ ಪ್ರದೇಶದಲ್ಲಿ ಹಲವೆಡೆ ನೀರಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಪೂರ್ಣ ಪ್ರಮಾಣದಲ್ಲಿ ನೀರಿನ ಹರಿವಿದ್ದ ನೇತ್ರಾವತಿಯ ಸ್ಥಿತಿ ಹೀಗಾದರೆ, ಮುಂದಿನ ದಿನಗಳಲ್ಲಿ ಎತ್ತಿನ ಹೊಳೆ ಯೋಜನೆ ಸಂಪೂರ್ಣ ಜಾರಿಯಾದರೆ, ಕರಾವಳಿಯ ಜನರಿಗೆ ನೇತ್ರಾವತಿಯ ನೀರು ದಕ್ಕುತ್ತದೆಯೇ? ನೀರಿನ ಹರಿವು ಕಡಿಮೆಯಾಗುವುದಿಲ್ಲವೇ? ಎತ್ತಿನ ಹೊಳೆಯ ಯೋಜನೆಯ ವಿರುದ್ಧ ಮಾತನಾಡಿದವರು ಯಾಕೆ ಈಗ ವೌನವಾಗಿದ್ದಾರೆ? ಕಂಬಳದ ಪರವಾಗಿ ಕೆಲವರು ಹೋರಾಟ ಮಾಡಿದರು. ಕಂಬಳವೇನು ನಮಗೆ ಬಾಯಾರಿದಾಗ ನೀರು ಕೊಡುತ್ತದೆಯೇ? ನೀರಿನ ಸಮಸ್ಯೆಯಾದರೆ ಇರುವ ಕೃಷಿಯೂ ನಾಶವಾಗುತ್ತದೆ. ಮತ್ತೆ ಕಂಬಳ ಇದ್ದರೆಷ್ಟು, ಬಿಟ್ಟರೆಷ್ಟು?

Writer - -ರಾಜು ವಿ ಬಂಟಕಲ್, ಸುಳ್ಯ

contributor

Editor - -ರಾಜು ವಿ ಬಂಟಕಲ್, ಸುಳ್ಯ

contributor

Similar News