ಕಾಡಾನೆ ದಾಳಿ: ರೈತನ ಸಾವು
ಮಾನಂದವಾಡಿ,ಮಾ.5: ಕಾಡಾನೆಯ ದಾಳಿಯಿಂದಾಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಪಾಲ್‌ವೆಳಿಚ್ಚಂ ಚಾಲಿಗದ್ದೆ ಪಾರಕ್ಕಲ್ ಶಶಿ(56) ಮೃತರಾದ ರೈತ ಆಗಿದ್ದಾರೆ. ಶನಿವಾರ ಬೆಳಗ್ಗೆ ಮನೆಯ ಹತ್ತಿರದ ಕೃಷಿಸ್ಥಳದಲ್ಲಿ ಶಶಿಯವರ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ಸಂಜೆ ಪಾಲ್‌ವೆಳಿಚ್ಚಂ ದೇವಾಲಯದ ಉತ್ಸವಕ್ಕೆ ಹೋಗಿದ್ದ ಇವರು ಮರಳಿ ಬಂದಿರಲಿಲ್ಲ. ನಂತರ ಊರವರು ಅವರನ್ನು ಹುಡುಕಾಡಿದ್ದರು.
ಶಶಿ ಅವರ ಕಾಲಿಗೆ ಆನೆ ತುಳಿದ ಗಾಯಗಳಾಗಿವೆ. ಬೆಳಗ್ಗೆ ಏಳು ಗಂಟೆಗೆ ವನಪಾಲಕರಿಗೆ ವಿವರ ಮುಟ್ಟಿಸಿದರು ಎರಡು ಗಂಟೆ ತಡವಾಗಿ ಅವರು ಸ್ಥಳಕ್ಕೆ ಬಂದಿದ್ದಾರೆ. ಇದರಿಂದ ಕೋಪಗೊಂಡ ಊರವರು ವನಪಾಲಕರನ್ನು ಕೆಲಕಾಲ ತಡೆದಿದ್ದರು. ಶವ ಮಹಜರಿಗೆ ಅವಕಾಶ ನೀಡಲಿಲ್ಲ. ನಂತರ ಮೇಲಾಧಿಕಾರಿಗಳು ಬಂದ ನಂತರ ಶವ ಮಹಜರಿಗೆ ಊರವರು ಅವಕಾಶ ನೀಡಿದ್ದಾರೆ.
ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಶಶಿಅವರ ಪುತ್ರನಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡುವ ಭರವಸೆ ನೀಡಲಾಗಿದೆ. ಮೃತದೇಹದ ಸಂಸ್ಕಾರ ಇಂದು ನಡೆಸಲಾಗುವುದು ಎಂದು ವರದಿ ತಿಳಿಸಿದೆ.