×
Ad

2 ತಿಂಗಳ ಜೈಲಿನ ಬಳಿಕ ಭಾರತದ ವ್ಯಕ್ತಿ ಊರಿಗೆ

Update: 2017-03-05 16:10 IST

ರಿಯಾದ್,ಮಾ. 5: ಜಿದ್ದಾಕ್ಕೆ ಹೋದರೆ ಪೊಲೀಸರು ಬಂಧಿಸಿ ಸುಲಭದಲ್ಲಿ ಊರಿಗೆ ಗಡಿಪಾರು ಮಾಡುತ್ತಾರೆ ಎಂದು ಜನರ ಸಲಹೆ ಕೇಳಿ ಕೆಲಸದ ಪ್ರಯೋಜಕರಿಗೆ ತಿಳಿಯದೆ ಪರಾರಿಯಾಗಿದ್ದ ಯುವಕ ಎರಡು ತಿಂಗಳು ಜೈಲುವಾಸದ ಬಳಿಕ ಊರಿಗೆ ಗಡಿಪಾರುಗೊಂಡಿದ್ದಾನೆ.

ರಿಯಾದ್‌ನಲ್ಲಿ ಮನೆಯ ವಾಹನ ಚಾಲಕ ಆಗಿ ಕೆಲಸ ಮಾಡುತ್ತಿದ್ದ ತೃಶೂರಿನ ಶಾನವಾರ್ ಎರಡು ತಿಂಗಳ ಜೈಲು ವಾಸ ಮುಗಿಸಿ ಹೇಗೂ ಊರಿಗೆ ಮರಳಿದ್ದಾರೆ. ಮೊದಲು ಅಲ್‌ಕೋಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಪೋನ್ಸರ್ ರಿಯಾದ್‌ಗೆ ವಾಸ ಬದಲಿಸಿದಾಗ ಶಾನವಾರ್ ಕೂಡಾ ರಿಯಾದ್‌ಗೆ ಬಂದಿದ್ದರು. ಇವರು ಚಲಾಯಿಸುತ್ತಿದ್ದ ಹುಂಡೈ ಎಸ್‌ಯುವಿಯನ್ನು ಪ್ರಯೋಜಕನ ತಂದೆ ಎಲ್ಲಿಗೋ ಕೊಂಡು ಹೋಗಿ ಮರಳಿದಾಗ ಗೆರ್‌ಬಾಕ್ಸ್‌ಗೆ ಹಾನಿಯಾಗಿತ್ತು. ಅದರ ದುರಸ್ತಿಗೆ 6000 ರಿಯಾಲ್ ಆಗುತ್ತದೆ ಎಂದು ತಿಳಿದು ಬಂದಿತ್ತು. ಈ ಹಣವನ್ನು ಶಾನವಾರ್ ನೀಡಬೇಕು ಎಂದು ಪ್ರಯೋಜಕರು ಹೆದರಿಸಿದ್ದರು. ಸಂಬಳದಿಂದ ಕಡಿತಗೊಳಿಸುವೆ ಎಂದು ಆತ ಹೇಳಿದ್ದ. ಇದರಿಂದ ಬೇಸತ್ತು ಶಾನವಾರ್ ಪ್ರಯೋಜಕರು ಹೇಳದೆಯೇ ಜಿದ್ದಾದ ಗಡಿಪಾರು ಕೇಂದ್ರಕ್ಕೆ ಹೋಗಿ ಊರಿಗೆ ಬರುವ ಉಪಾಯ ಮಾಡಿದ್ದರು.

ಆದರೆ ಇವರ ಇಖಾಮ ಪರಿಶೀಲಿಸಿದಾಗ ಅನಧಿಕೃತ ವಲಸೆಯ ವ್ಯಕ್ತಿ ಯಲ್ಲ ಎಂದು ಪೊಲೀಸಧಿಕಾರಿಗಳಿಗೆ ಮನದಟ್ಟಾಗಿ ಎರಡು ತಿಂಗಳು ಕಾಲ ಜೈಲಿನಲ್ಲಿರಿಸಿ ಪ್ರಯೋಜಕನನ್ನು ಸಂಪರ್ಕಿಸಿದ್ದರು. ಪ್ರಯೋಜಕರು ತನ್ನ ವಾಹನ ಹಾಳು ಮಾಡಿದ್ದಾನೆ. ಹೇಳದೆಯೇ ಓಡಿ ಬಂದಿದ್ದಾನೆ. ತನಗೆ 18,000ರಿಯಾಲ್ ನಷ್ಟ ಪರಿಹಾರ ನೀಡದೆ ಊರಿಗೆ ಕಳುಹಿಸಬಾರದೆಂದು ಪೊಲೀಸರಿಗೆ ತಿಳಿಸಿದ್ದರಿಂದ ಶಾನವಾರ್ ಜೈಲಿನೊಳಗೆ ಸಿಕ್ಕಿಬಿದ್ದಿದ್ದರು. ಕೊನೆಗೂ ಪ್ರಯೋಜಕರೊಂದಿಗೆ ಚರ್ಚಿಸಿ 5,000ರಿಯಾಲ್‌ಗೆ ಆತನನ್ನುಒಪ್ಪಿಸಿ ಜೈಲಿನಿಂದ ಬಿಡುಗಡೆಗೊಂಡು ಶನಿವಾರ ಊರಿಗೆ ಶಾನವಾರ್ ಬಂದು ತಲುಪಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News