ಗುಜರಾತ್‌ನ ಕಛ್‌ನಲ್ಲಿ ಭೂಕಂಪ

Update: 2017-03-05 10:59 GMT

ಅಹ್ಮದಾಬಾದ್,ಮಾ.5: ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ರವಿವಾರ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0ರಷ್ಟಿತ್ತು.ನಸುಕಿನ 2:45ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಯಾವುದೇ ಜೀವ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಗಾಂಧಿನಗರದ ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆಯ ಅಧಿಕಾರಿಯೋರ್ವರು ತಿಳಿಸಿದರು.

ಭೂಕಂಪದ ಕೇಂದ್ರಬಿಂದು ಕಛ್ ಜಿಲ್ಲೆಯ ರಾಪಾರ್ ಪಟ್ಟಣದಿಂದ 17 ಕಿ.ಮೀ.ದೂರದಲ್ಲಿ ಸ್ಥಿತಗೊಂಡಿತ್ತು ಎಂದರು.ರಾಪಾರ್ ಬಳಿ ಭೂಕಂಪ ಸಂಭವಿಸಿದ್ದು, ಸಮೀಪದ ಬಚಾವು ಪಟ್ಟಣದಲ್ಲಿಯೂ ಕಂಪನ ಅನುಭವಕ್ಕೆ ಬಂದಿತ್ತು ಎಂದು ಕಚ್ ಜಿಲ್ಲಾಧಿಕಾರಿ ಎಂ.ಎ.ಗಾಂಧಿ ತಿಳಿಸಿದರು. ಮುಂಜಾಗ್ರತೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯು ತನ್ನ ಎರಡು ತಂಡಗಳನ್ನು ರಾಪಾರ್ ಮತ್ತು ಬಚಾವುಗಳಲ್ಲಿ ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News