ಸರ್ವಮಹಿಳಾ ಸಿಬ್ಬಂದಿಗಳಿದ್ದ ಯಾನ ನಿರ್ವಹಿಸಿ ವಿಶ್ವದಾಖಲೆಗೆ ಸಜ್ಜಾದ ಏರ್‌ಇಂಡಿಯಾ
ಹೊಸದಿಲ್ಲಿ,ಮಾ.5: ಸರಕಾರಿ ಸ್ವಾಮ್ಯದ ಏರ್‌ಇಂಡಿಯಾ ನೂತನ ವಿಶ್ವದಾಖಲೆಯನ್ನು ಸೃಷ್ಟಿಸುವ ಹಂಬಲದೊಂದಿಗೆ ಜಾಗತಿಕ ಮಹಿಳಾ ದಿನಕ್ಕೆ ಮುನ್ನ ಸರ್ವ ಮಹಿಳಾ ಸಿಬ್ಬಂದಿಗಳಿದ್ದ ಯಾನವನ್ನು ವಿಶ್ವದ ಸುತ್ತ ನಿರ್ವಹಿಸಿದೆ.
ಫೆ.27ರಂದು ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಸ್ಯಾನ್‌ಫ್ರಾನ್ಸಿಸ್ಕೋಕ್ಕೆ ಯಾನವನ್ನು ಆರಂಭಿಸಿದ್ದ ವಿಮಾನವು ವಿಶ್ವಾದ್ಯಂತ ಹಾರಾಟ ನಡೆಸಿದ ಬಳಿಕ ಶುಕ್ರವಾರ ವಾಪಸಾಗಿ.ಚ್ಟ.ಸ್ಯಾನ್‌ಫ್ರಾನ್ಸಿಸ್ಕೋಕ್ಕೆ ತೆರಳುವ ಮಾರ್ಗದಲ್ಲಿ ಪ್ಯಾಸಿಫಿಕ್ ಸಾಗರದ ಮೇಲೆ ಹಾರಿದ್ದ ಬೋಯಿಂಗ್ 777-200 ಎಲ್‌ಆರ್ ವಿಮಾನವು ಮರು ಪ್ರಯಾಣದಲ್ಲಿ ಅಟ್ಲಾಂಟಿಕ್ ಸಮುದ್ರ ಮಾರ್ಗವನ್ನು ಆಯ್ದುಕೊಂಡಿತ್ತು.
ತನ್ಮೂಲಕ ವಿಶ್ವಕ್ಕೊಂದು ಸುತ್ತು ಹಾಕಿದೆ. ತನ್ನ ಈ ಸಾಧನೆಗಾಗಿ ಏರ್ ಇಂಡಿಯಾ ಈಗಾಗಲೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅರ್ಜಿಗಳನ್ನು ಸಲ್ಲಿಸಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದರು.ಏರ್ ಇಂಡಿಯಾ ಪ್ಯಾಸಿಫಿಕ್ ಮಾರ್ಗದಲ್ಲಿ ಯಾನ ನಿರ್ವಹಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ.
ಈ ಮಾರ್ಗವು ಹಾರಾಟದ ಅವಧಿಯನ್ನು ಮೂರು ಗಂಟೆಗಳಷ್ಟು ಕಡಿಮೆಯಾಗಿಸುತ್ತದೆ.ಕಾಕ್‌ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿಗಳಲ್ಲದೆ, ಚೆಕ್-ಇನ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿಗಳು ಹಾಗೂ ವಿಮಾನವನ್ನು ಪ್ರಮಾಣೀಕರಿಸಿದ ಇಂಜಿನಿಯರ್ ಗಳು...ಹೀಗೆ ಎಲ್ಲರೂ ಮಹಿಳೆಯರೇ ಆಗಿದ್ದರು.ಇಷ್ಟೇ ಅಲ್ಲ, ವಿಮಾನದ ನಿರ್ಗಮನ ಮತ್ತು ಆಗಮನಕ್ಕೆ ಹಸಿರು ನಿಶಾನೆ ತೋರಿಸಿದ್ದ ವಾಯು ಸಂಚಾರ ನಿಯಂತ್ರಣಾಧಿಕಾರಿಗಳೂ ಮಹಿಳೆಯರೇ ಆಗಿದ್ದರು.ಏರ್ ಇಂಡಿಯಾ ತನ್ನ ದೇಶಿಯ ಮತ್ತು ಇತರ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಸರ್ವಮಹಿಳಾ ಸಿಬ್ಬಂದಿಗಳ ಯಾನಗಳನ್ನು ನಿರ್ವಹಿಸಲು ಉದ್ದೇಶಿಸಿದೆ.