ಎಚ್ಚರಿಕೆ...ನೋಟು ರದ್ದತಿಯ ಬೆನ್ನಲ್ಲೇ ಹೆಚ್ಚುತ್ತಿದ್ದಾರೆ ಸೈಬರ್ ಕ್ರಿಮಿನಲ್ ಗಳು !

Update: 2017-03-07 06:40 GMT

ಹೊಸದಿಲ್ಲಿ, ಮಾ.7: ನೋಟು ರದ್ದತಿಯ ನಂತರ ಹೆಚ್ಚೆಚ್ಚು ಜನರು ಬಿಟ್ ಕಾಯಿನ್ ನಂತಹ ಡಿಜಿಟಲ್ ಕರೆನ್ಸಿ ಮೊರೆ ಹೋಗುತ್ತಿದ್ದಂತೆಯೇ ಅವುಗಳ ದರಗಳ ಹೆಚ್ಚಳದ ಜೊತೆಗೆ ಸೈಬರ್ ಕ್ರಿಮಿನಲ್ ಗಳೂ ಹೆಚ್ಚಾಗುತ್ತಿದ್ದಾರೆ. ಈ ಸೈಬರ್ ಕ್ರಿಮಿನಲ್ ಗಳು ಜನರ ಇ-ವಾಲೆಟ್ ಗಳಿಗೆ ಕತ್ತರಿ ಹಾಕಲು ವಿನೂತನ ಉಪಾಯಗಳನ್ನು ಹೂಡುತ್ತಿದ್ದಾರೆ.

ಕಳೆದ ವಾರವಷ್ಟೇ ದಿಲ್ಲಿ ಮೂಲದ ಉದ್ಯಮಿಯೊಬ್ಬರು ಶಂಕಿತ ಬಿಟ್ ಕಾಯಿನ್ ಮೈನರ್ ಒಬ್ಬನಿಂದಾಗಿ ರೂ 8.5 ಲಕ್ಷ ಕಳೆದುಕೊಂಡಿದ್ದಾರೆ. ಈ ಏಜೆಂಟ್ ಉದ್ಯಮಿಗೆ 10 ಬಿಟ್ ಕಾಯಿನ್ ಗಳ ಆಶ್ವಾಸನೆ ನೀಡಿ ಆತನ ಹೂಡಿಕೆ ಆರು ತಿಂಗಳಲ್ಲಿ ದ್ವಿಗುಣವಾಗುವುದೆಂಬ ಭರವಸೆ ನೀಡಿದ್ದು ಮೋಸ ಹೋಗಿದ್ದರೂ ಡಿಜಿಟಲ್ ಕರೆನ್ಸಿಗಳು ಆರ್ ಬಿ ಐ ಮಾನ್ಯತೆ ಪಡೆಯದೇ ಇರುವುದರಿಮದ ಈ ಉದ್ಯಮಿ ಪೊಲೀಸ್ ದೂರು ನೀಡಿಲ್ಲ.

ಬಿಟ್ ಕಾಯಿನ್ ಗೆ ಸಂಬಂಧಿಸಿದಂತೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹಿರಿಯ ಕ್ರೈಂ ಬ್ರ್ಯಾಂಚ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ನವೆಂಬರ್ 2016ರ ನೋಟು ಅಮಾನ್ಯೀಕರಣದ ನಂತರ ಬಿಟ್ ಕಾಯಿನ್ ಗೆ ಬೇಡಿಕೆ ಹೆಚ್ಚಿದ್ದು ಹಿಂದಿನ ತಲೆಮಾರಿಗೆ ಚಿನ್ನ ಇದ್ದಂತೆ ಈಗಿನ ಟೆಕ್ ಪ್ರಿಯ ಜನತೆಗೆ ಬಿಟ್ ಕಾಯಿನ್ ಆಗಿದೆ, ಎಂದು ಆ ಅಧಿಕಾರಿ ವಿವರಿಸುತ್ತಾರೆ.

ಬಿಟ್ ಕಾಯಿನ್ ಒಂದು ಡಿಜಿಟಲ್ ಕ್ರಿಪೋ ಕರೆನ್ಸಿಯಗಿದ್ದು ಪ್ರಮುಖ ಬಿಟ್ ಕಾಯಿನ್ ಟ್ರೇಡಿಂಗ್ ಎಕ್ಸ್ ಚೇಂಜ್ ಪ್ರಕಾರ ಅವುಗಳ ಬಳಕೆ ಕಳೆದೊಂದು ವರ್ಷದಲ್ಲಿ ಶೇ 250ರಷ್ಟು ಹೆಚ್ಚಾಗಿದೆ. ಪರಿಸ್ಥಿತಿಯ ಲಾಭ ಪಡೆದು ಬಿಟ್ ಕಾಯಿನ್ ನಂತಹುದೇ ಬೇರೆ ಕ್ರಿಪ್ಟೋ ಕರೆನ್ಸಿಗಳಾದ ಟೈಮ್ ಕಾಯಿನ್, ಒನ್ ಕಾಯಿನ್ ಮುಂತಾದವುಗಳು ಜನರನ್ನು ತಲುಪುವಂತೆ ಮಾಡುವಲ್ಲಿ ಕೆಲ ವಂಚಕರು ಕಾರ್ಯನಿರತರಾಗಿದ್ದಾರೆ. ಕೆಲ ತಜ್ಞರ ಪ್ರಕಾರ ಭಾರತದಲ್ಲಿ ಜನರು ಬಿಟ್ ಕಾಯಿನ್ ಗಳನ್ನು ಖರೀದಿಸಿ ಅವುಗಳನ್ನು ಮಾರಾಟ ಮಾಡದೆ ಅವುಗಳ ಮೌಲ್ಯ ಹೆಚ್ಚುವಂತೆ ಮಾಡಿದ್ದಾರೆ. ನೋಟು ಅಮಾನ್ಯೀಕರಣದ ನಂತರ ಹಲವು ವರ್ತಕರು ತಮ್ಮಲ್ಲಿದ್ದ ಕಪ್ಪು ಹಣದ ಬದಲಿಗೆ ಬಿಟ್ ಕಾಯಿನ್ ಪಡೆದುಕೊಂಡಿದ್ದಾರೆಂದೂ ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News