ಉತ್ತರಪ್ರದೇಶ 140 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಶೂನ್ಯ ಫಲಿತಾಂಶ ಪಡೆದ ಎಡಪಕ್ಷಗಳು
ವಾರಣಾಸಿ,ಮಾ.12: ಬಿಜೆಪಿಗೆ ಬಹುದೊಡ್ಡ ವಿಜಯ ಸಿಕ್ಕಿದ ಉತ್ತರಪ್ರದೇಶದಲ್ಲಿ ವಾಮಪಕ್ಷಗಳಿಗೆ ಒಂದೇ ಒಂದು ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. 140 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಒಂದು ಕಡೆಕೂಡಾಅದು ಗೆದ್ದಿಲ್ಲ. ಒಂದು ಕಾಲದಲ್ಲಿ ಉತ್ತರಪ್ರದೇಶದಲ್ಲಿ ಕಮ್ಮ್ಯುನಿಸ್ಟರಿಗೆ ದೊಡ್ಡ ಮಟ್ಟದ ಬೆಂಬಲವಿತ್ತು. ಪ್ರಾದೇಶಿಕ ಪಕ್ಷಗಳು ಅಲ್ಲಿ ಗಟ್ಟಿಯಾದಂತೆ ಎಡಪಕ್ಷಗಳು ದುರ್ಬಲವಾದವು. 1974ರಲ್ಲಿ 18 ಸ್ಥಾನಗಳು ಎಡಪಕ್ಷಗಳಿಗಿತ್ತು (ಸಿಪಿಎಂ-2,ಸಿಪಿಐ 16) 1996ರಲ್ಲಿ ಅದು ಕೇವಲ ನಾಲ್ಕು ಸ್ಥಾನಗಳಿಗೆ ಸೀಮಿತಗೊಂಡಿತು. ಆನಂತರ ಎಡಪಕ್ಷಗಳಿಗೆ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಸ್ಥಾನವನ್ನುಕೂಡಾ ಗೆಲ್ಲಲು ಅಗಿಲ್ಲ. ಎರಡು ದಶಕಗಳಲ್ಲಿ ಒಬ್ಬ ಸದಸ್ಯನನ್ನು ಕೂಡಾ ಉತ್ತರ ಪ್ರದೇಶ ವಿಧಾನಸಭೆಗೆ ಕಳುಹಿಸಲು ಸಾಧ್ಯವಾಗಿಲ್ಲ. ಸಿಪಿಐ 80 ಕ್ಷೇತ್ರಗಳಲ್ಲಿ, ಸಿಪಿಐ, 26,ಸಿಪಿಐಎಂಎಲ್ 33, ಫಾರ್ವಡ್‌ಬ್ಲಾಕ್, ಆರ್‌ಎಸ್ಪಿ, ಎಸ್‌ಯುಸಿಐ ಕೂಡಾ ಉತ್ತರ ಪ್ರದೇಶ ವಿಧಾನಭಾಚುನಾವಣೆಯಲ್ಲಿ ಸ್ಪರ್ಧಿಸಿವೆ.
ಮೊದಲು ಸಮಾಜವಾದಿ- ಕಾಂಗ್ರೆಸ್ ಸಖ್ಯದೊಂದಿಗೆ ಸೇರಲು ಎಡಪಕ್ಷಗಳು ನಿರ್ಧರಿಸಿದ್ದವು. ಅದಕ್ಕೆ ಅವರು ಅವಕಾಶ ನೀಡಲಿಲ್ಲ. ಸಮಾಜವಾದಿ ಪಕ್ಷ ಕಾಂಗ್ರೆಸ್‌ಗೆ 103 ಕ್ಷೇತ್ರಗಳನ್ನು ಮೀಸಲಿಟ್ಟದ್ದು ಎಡಪಕ್ಷಗಳ ಸಾಧ್ಯತೆಯನ್ನು ಇಲ್ಲದಾಗಿಸಿತು. ಎಡಪಕ್ಷಗಳಿಂದ ಅಂತಹ ಪ್ರಯೋಜನವಿಲ್ಲ ಎಂದು ಸಮಾಜವಾದಿ ಪಕ್ಷ ಭಾವಿಸಿತ್ತು. ಬಿಎಸ್ಪಿ ಕೂಡಾ ಸ್ಥಾನ ನೀಡಲು ಸಿದ್ಧವಾಗಲಿಲ್ಲ. ಹೀಗಾಗಿ ಎಡ ಪಕ್ಷಗಳು ಒಂದು ಗೂಡಿ ಚುನಾವಣೆಗೆ ನಿಲ್ಲಲು ನಿರ್ಧರಿಸಿದವು. ಈಗ ಫಲಿತಾಂಶ ಬಂದಿದೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಅದಕ್ಕಾಗಿಲ್ಲ ಎಂದು ವರದಿ ತಿಳಿಸಿದೆ.