×
Ad

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮದ್ರಸ ಅಧ್ಯಾಪಕನ ಬಂಧನ

Update: 2017-03-15 12:56 IST

ಇರಿಟ್ಟಿ,ಮಾ. 15: ವಿಳಕ್ಕೋಡ್ ಚಾಕ್ಕಾಡ್ ಮದ್ರಸದಲ್ಲಿ ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮದ್ರಸ ಅಧ್ಯಾಪಕನನ್ನು ಬಂಧಿಸಲಾಗಿದೆ. ವಯನಾಡ್ ವೆಳ್ಳಮುಂಡ್ ತರುವಣ ಎಂಬಲ್ಲಿನ ಮುಹಮ್ಮದ್ ರಾಫಿ(26) ಬಂಧಿತ ಶಿಕ್ಷಕ.

ಈತನ ವಿರುದ್ಧ ಪೊಕ್ಸೊ ಕಾಯ್ದೆಯನ್ವಯ ಪೊಲೀಸರು ದೂರು ದಾಖಲಿಸಿದ್ದಾರೆ. ಅಧ್ಯಾಪಕ ತರಗತಿ ನಡೆಯುವ ವೇಳೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ವಿದ್ಯಾರ್ಥಿನಿಯರು ಮನೆಯವರಲ್ಲಿ ಹೇಳಿದ್ದರು. ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಕಣ್ಣೂರಿನಿಂದ ಮಹಿಳಾ ಪೊಲೀಸರು ಬಂದು ಮಕ್ಕಳನ್ನು ಪ್ರಶ್ನಿಸಿದಾಗ ವಿಷಯ ಸ್ಪಷ್ಟಪಡಿಸಿದರು. ನಂತರ ಮುಯುಕುನ್ನ್ ಎಸ್ಸೈ ರವಿಚಂದ್ರನ್ ಅಧ್ಯಾಪಕನನ್ನು ಬಂಧಿಸಿದ್ದಾರೆ. ಈತ ಒಂದು ತಿಂಗಳ ಹಿಂದೆಯಷ್ಟೇ ಚಾವಕ್ಕಾಡ್ ಮದ್ರಸಕ್ಕೆ ಅಧ್ಯಾಪಕನಾಗಿ ಸೇರಿದ್ದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News