×
Ad

ತೂಕ ಕಳೆದುಕೊಳ್ಳುತ್ತಿರುವ ವಿಶ್ವದ ತೂಕದ ಮಹಿಳೆ ಇಮಾನ್ ಅಹ್ಮದ್

Update: 2017-03-19 13:07 IST

ಮುಂಬೈ, ಮಾ.19: ವಿಶ್ವದ ಅತ್ಯಂತ ತೂಕದ ಮಹಿಳೆ ಎನಿಸಿಕೊಂಡಿದ್ದ ಈಜಿಪ್ಟ್ ಪ್ರಜೆ ಇಮಾನ್ ಅಹ್ಮದ್ ಭಾರತದಲ್ಲಿ ಚಿಕಿತ್ಸೆ ಪಡೆದ ನಂತರ 140ಕ್ಕೂ ಅಧಿಕ ತೂಕ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತೂಕ ಇಳಿಸಿಕೊಳ್ಳುವ ಚಿಕಿತ್ಸೆಗಾಗಿ ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ದಾಖಲಾಗಿರುವ ಇಮಾನ್ ಕಳೆದ ತಿಂಗಳು ತೂಕ ಕಡಿಮೆ ಮಾಡುವ ಬಾರಿಯಾಟ್ರಿಕ್ ಸರ್ಜರಿಗೆ ಒಳಗಾಗಿದ್ದರು.

‘‘ಇಮಾನ್‌ರ ಈಗಿನ ತೂಕ 358 ಕೆ.ಜಿ. ಫೆ.11 ರಂದು ವಿಶೇಷವಾಗಿ ನಿರ್ಮಿಸಲ್ಪಟ್ಟ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದಾಗ ಅವರ ತೂಕ ಬರೋಬ್ಬರಿ 500 ಕೆಜಿ ಇತ್ತು. ಈಗ ಅವರಿಗೆ ಲೋ ಸೋಡಿಯಂ ಪ್ರೋಟಿನ್‌ನ್ನು ಸೋಯಾ ಹಾಲಿನಲ್ಲಿ ಮಿಶ್ರ ಮಾಡಿ ನೀಡಲಾಗುತ್ತಿದೆ. ಅವರಿಗೆ ಎರಡು ಗಂಟೆಗೊಮ್ಮೆ ದ್ರವಾಹಾರ ನೀಡಲಾಗುತ್ತಿದೆ. ಕೊಳವೆಯ ಮೂಲಕವೇ ಅವರು ಆಹಾರ ಸೇವಿಸುತ್ತಿದ್ದಾರೆ. ಈ ಹಿಂದೆ ಅವರು ಪಕ್ಷವಾತ ಪೀಡಿತರಾಗಿರುವ ಕಾರಣ ಆಹಾರ ನುಂಗಲು ಸಾಧ್ಯವಾಗುತ್ತಿಲ್ಲ’’ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News