‘ವಿರಾಟ್ ಕೊಹ್ಲಿ ವಿಶ್ವ ಕ್ರೀಡೆಯ ಡೊನಾಲ್ಡ್ ಟ್ರಂಪ್’

Update: 2017-03-21 17:48 GMT

 ಮೆಲ್ಬೋರ್ನ್, ಮಾ.21: ಈಗ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮೈದಾನದ ಒಳಗೆ ಹಾಗೂ ಹೊರಗೆ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ಕೊಹ್ಲಿ ಸರಣಿಯಲ್ಲಿ ಈತನಕ ಮಿಂಚಿಲ್ಲ. ಕೊಹ್ಲಿಯನ್ನು ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗರು ಮಾತ್ರವಲ್ಲ ಮಾಧ್ಯಮಗಳು ನಿರಂತರವಾಗಿ ಟೀಕಿಸುತ್ತಿವೆ. ಕೊಹ್ಲಿಯನ್ನು ವಿಶ್ವ ಕ್ರೀಡೆಯ ಡೊನಾಲ್ಡ್ ಟ್ರಂಪ್ ಎಂದು ಕರೆದಿರುವ ಆಸೀಸ್ ಮಾಧ್ಯಮಗಳು ಒಂದು ಹೆಜ್ಜೆ ಮುಂದೆ ಹೋಗಿವೆ.

 ರಾಂಚಿಯಲ್ಲಿ 3ನೆ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡ ಬಳಿಕ ಆಸ್ಟ್ರೇಲಿಯ ಮಾಧ್ಯಮ ಮತ್ತೊಮ್ಮೆ ಕೊಹ್ಲಿಯನ್ನು ಗುರಿಯಾಗಿಸಿ ಟೀಕೆ ಮಾಡಲಾರಂಭಿಸಿವೆ. ‘ಡೈಲಿ ಟೆೆಲಿಗ್ರಾಫ್’ ಪತ್ರಿಕೆಯು 28ರ ಹರೆಯದ ಕೊಹ್ಲಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೋಲಿಕೆ ಮಾಡಿದೆ.

 ‘‘ವಿರಾಟ್ ಕೊಹ್ಲಿ ವಿಶ್ವ ಕ್ರೀಡೆಯ ಡೊನಾಲ್ಡ್ ಟ್ರಂಪ್ ಆಗಿದ್ದಾರೆ. ಅಮೆರಿಕದ ಅಧ್ಯಕ್ಷ ಟ್ರಂಪ್ ರೀತಿಯೇ ಕೊಹ್ಲಿ ಕೂಡ ಮಾಧ್ಯಮಗಳನ್ನು ದೂಷಿಸಲು ನಿರ್ಧರಿಸಿದ್ದಾರೆ. ನಡೆದ ಘಟನೆಯನ್ನು ನಡೆದೇ ಇಲ್ಲ ಎಂದು ಹೇಳುವ ಮೂಲಕ ಟ್ರಂಪ್ ಹಾದಿ ತುಳಿಯುತ್ತಿದ್ದಾರೆ’’ ಎಂದು ಹೇಳಿದೆ.

ಪ್ರತಿ ಸರಣಿಗೆ ಮೊದಲು ಆಸ್ಟ್ರೇಲಿಯ ಆಟಗಾರರು ಭಾರತದ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಸಲು ಯತ್ನಿಸುವುದು ಇದೇ ಮೊದಲಲ್ಲ. ಬೆಂಗಳೂರು ಟೆಸ್ಟ್‌ನಲ್ಲಿ ಎಲ್ಬಿಡಬ್ಲು ಬಲೆಗೆ ಬಿದ್ದಿದ್ದ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಡಿಆರ್‌ಎಸ್ ಮೊರೆ ಹೋದ ಸಂದರ್ಭ ಡ್ರೆಸ್ಸಿಂಗ್‌ರೂಮ್‌ನತ್ತ ಸನ್ನೆ ಮಾಡಿ ಸಲಹೆ ಪಡೆಯಲು ಯತ್ನಿಸಿದ್ದರು ಎಂದು ಕೊಹ್ಲಿ ಆರೋಪಿಸಿದ್ದರುತ್ತು. ಈ ವಿಷಯದ ಬಗ್ಗೆ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯ ನಡುವೆಯೂ ವಿರಸ ಉಂಟಾಗಿತ್ತು. ಈ ವಿಷಯದ ಬಗ್ಗೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದ ಬಳಿಕ ಬಿಸಿಸಿಐ ತನ್ನ ದೂರನ್ನು ಹಿಂದಕ್ಕೆ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News