ರನ್ ಬರ ನೀಗಿಸಲು ಯತ್ನಿಸುವೆ: ವಾರ್ನರ್

Update: 2017-03-21 17:57 GMT

ಹೊಸದಿಲ್ಲಿ, ಮಾ.21: ಆಸ್ಟ್ರೇಲಿಯದ ಕ್ರಿಕೆಟ್ ತಂಡದ ಉಪ ನಾಯಕ ಡೇವಿಡ್ ವಾರ್ನರ್ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

‘‘ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗರು ವಿದೇಶ ಇಲ್ಲವೇ ಸ್ವದೇಶದಲ್ಲಿ ನಡೆಯುವ ಸರಣಿಯಲ್ಲಿ ರನ್ ಬರ ಎದುರಿಸುತ್ತಾರೆ. ಇದು ಕ್ರಿಕೆಟ್‌ನಲ್ಲಿ ಸಹಜ. ನನಗೆ ಚೆಂಡನ್ನು ಸರಿಯಾಗಿ ಎದುರಿಸಲು ಸಾಧ್ಯವಾಗಿಲ್ಲ. ಮುಂದಿನ ಪಂದ್ಯಕ್ಕೆ ಶಿಸ್ತುಬದ್ಧವಾಗಿ ಪೂರ್ವ ತಯಾರಿ ನಡೆಸುವೆನು’’ ಎಂದು ವಾರ್ನರ್ ಕ್ರಿಕೆಟ್ ಆಸ್ಟ್ರೇಲಿಯದ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ವಾರ್ನರ್ ಭಾರತ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಒಟ್ಟು 131 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಭಾರತದ ನಾಯಕ ವಿರಾಟ್ ಕೊಹ್ಲಿ(46 ರನ್) ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ 2ನೆ ಬ್ಯಾಟ್ಸ್‌ಮನ್ ಆಗಿದ್ದಾರೆ.

ವಾರ್ನರ್ 2014ರ ಅಕ್ಟೋಬರ್‌ನಲ್ಲಿ ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 133 ರನ್ ಗಳಿಸಿದ ಬಳಿಕ ವಾರ್ನರ್ ವಿದೇಶಿ ನೆಲದಲ್ಲಿ ದೊಡ್ಡ ಸ್ಕೋರ್ ಗಳಿಸಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News