×
Ad

ಬಿಜೆಪಿ ವಿರುದ್ಧ ಟೀಕೆ: ರಾಮಚಂದ್ರ ಗುಹಾಗೆ ಬೆದರಿಕೆ ಇ-ಮೇಲ್

Update: 2017-03-29 09:26 IST

ಹೊಸದಿಲ್ಲಿ, ಮಾ.29: ಬಿಜೆಪಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಕಾರಣಕ್ಕೆ ತಮಗೆ ಒಂದೇ ತೆರನಾದ ಬೆದರಿಕೆ ಇ-ಮೇಲ್‌ಗಳು ಬರುತ್ತಿವೆ ಎಂದು ಇತಿಹಾಸತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಹನ್ನೆರಡಕ್ಕೂ ಹೆಚ್ಚು ಇ-ಮೇಲ್‌ಗಳು ಬಂದಿದ್ದು, ರಾಜಕಾರಣಿಗಳು ಮತ್ತು ಪತ್ರಕರ್ತರ ಹೆಸರಿಗೆ ಕೂಡಾ ಇದನ್ನು ಕಳುಹಿಸಲಾಗಿದೆ. ಅಂಥ ಒಂದು ಇ-ಮೇಲ್ ಅನ್ನು ಟೈಮ್ಸ್ ಆಫ್ ಇಂಡಿಯಾ ಜತೆ ಹಂಚಿಕೊಂಡಿದ್ದಾರೆ. "ಹಲವು ಮಂದಿ ಹಲವು ಐಡಿ ಮೂಲಕ ಒಂದೇ ತೆರನಾದ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸುತ್ತಿದ್ದು, ನೀವು ಬಿಜೆಪಿಯನ್ನು ಟೀಕಿಸಿ ಮಾಡಿದ ಪಾಪಕ್ಕಾಗಿ ಡಿವೈನ್ ಮಹಾಕಾಳ್ ಅವರಿಂದ ಶಿಕ್ಷೆ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನು ಮೇಲೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸಬೇಡಿ. ಅವರಿಗೆ ಡಿವೈನ್ ಮಹಾಕಾಳ್ ಅವರ ಆಶೀರ್ವಾದ ಇದೆ" ಎಂದು ಅವರು ಟ್ವೀಟರ್ ಖಾತೆಯಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News