ರಾಜಸ್ತಾನದಲ್ಲಿ ಇನ್ನು ಗೋ ಸುರಕ್ಷೆ ಮೇಲ್ತೆರಿಗೆ

Update: 2017-04-06 13:43 GMT

ಜೈಪುರ, ಎ.6: ರಾಜಸ್ತಾನದಲ್ಲಿ ಇನ್ನು ಮುಂದೆ ಬಾಡಿಗೆ ಒಪ್ಪಂದ ಪತ್ರ, ಅಡಮಾನ ದಾಖಲೆ, ಲೀಸ್ ಒಪ್ಪಂದ ಪತ್ರ ಮುಂತಾದವುಗಳನ್ನು ಮಾಡಿಕೊಳ್ಳುವಾಗ ಮುದ್ರಾಂಕ ಶುಲ್ಕ(ಸ್ಟಾಂಪ್ ಡ್ಯೂಟಿ)ದ ಶೇ.10ರಷ್ಟು ‘ಗೋ ಸುರಕ್ಷೆ’ ಮೇಲ್ತೆರಿಗೆ ತೆರಬೇಕಾಗುತ್ತದೆ.

 ಈ ಬಗ್ಗೆ ರಾಜ್ಯ ಸರಕಾರದ ಹಣಕಾಸು ಇಲಾಖೆಯು ಮಾರ್ಚ್ 31ರಂದು ಆದೇಶ ಹೊರಡಿಸಿದೆ. ರಾಜಸ್ತಾನ ಮುದ್ರಾಂಕ ಶುಲ್ಕ ಕಾಯ್ದೆ 1998ರಡಿ ನೀಡಲಾಗಿರುವ ಅಧಿಕಾರ ವನ್ನು ಬಳಸಿಕೊಂಡು , ಗೋವುಗಳ ಸಂರಕ್ಷಣೆ ಮತ್ತು ವಂಶ ವೃದ್ಧಿಯ ಉದ್ದೇಶದಿಂದ ಶೇ.10ರಷ್ಟು ಮೇಲ್ತೆರಿಗೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

   ಅದಾಗ್ಯೂ ನ್ಯಾಯಿಕ ಠಸ್ಸೆ ಪತ್ರ, ರೆವೆನ್ಯೂ ಸ್ಟಾಂಪ್, ಜೀವವಿಮೆ ಪಾಲಿಸಿಗಳಿಗೆ ಈ ಮೇಲ್ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಹಾಗೂ ಗೋವುಗಳ ಸಂರಕ್ಷಣೆಗಾಗಿ ಮೇಲ್ತೆರಿಗೆ ವಿಧಿಸುವ ಬಗ್ಗೆ ವಿಧಾನಸಭೆಯಲ್ಲಿ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ವಸುಂಧರ ರಾಜೆ ಪ್ರಸ್ತಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News