ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಅಧಿಕಾರಿಗಳ ಅವಧಿಪೂರ್ವ ನಿವೃತ್ತಿ : ಸರಕಾರದ ಹೇಳಿಕೆ

Update: 2017-04-12 14:35 GMT

ಹೊಸದಿಲ್ಲಿ, ಎ.12: ಕೆಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕಳಪೆ ನಿರ್ವಹಣೆ ತೋರಿದ ಕಾರಣ ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಅವರನ್ನು ಅವಧಿಪೂರ್ವ ನಿವೃತ್ತಿಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು ತಿಳಿಸಿದರು.

1981ರ ಬ್ಯಾಚ್‌ನ ಕರ್ನಾಟಕ ಪದವೃಂದದ ಐಎಎಸ್ ಅಧಿಕಾರಿ ಎಂ.ಎನ್.ವಿಜಯ್‌ಕುಮಾರ್ ಅವರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ ಮತ್ತು ಇನ್ನೋರ್ವ ಅಧಿಕಾರಿ ಕೆ.ನರಸಿಂಹ ಅವರಿಗೆ ಅವಧಿಪೂರ್ವ ನಿವೃತ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ನೀಡಲಾಗಿದೆ ಎಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

1992ರ ಬ್ಯಾಚ್‌ನ ಛತ್ತೀಸ್‌ಗಢ ಪದವೃಂದದ ಐಪಿಎಸ್ ಅಧಿಕಾರಿ ರಾಜ್‌ಕುಮಾರ್ ದೇವಾಂಗನ್ ಹಾಗೂ 1998ರ ಬ್ಯಾಚ್‌ನ ಕೇಂದ್ರಾಡಳಿತ ಪ್ರದೇಶ ಪದವೃಂದದ ಐಎಎಸ್ ಅಧಿಕಾರಿ ಮಾಯಾಂಕ್ ಶೀಲ್ ಚೌಹಾಣ್ ಅವರನ್ನು ಅವಧಿಪೂರ್ವ ನಿವೃತ್ತಿಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕರ್ತವ್ಯದ ಸಂದರ್ಭ ಕೆಟ್ಟ ನಡತೆ ತೋರಿದ ಆರೋಪದಲ್ಲಿ 2014ರಿಂದ ಮಾರ್ಚ್ 2017ರವರೆಗಿನ ಅವಧಿಯಲ್ಲಿ 19 ಐಎಎಸ್ ಮತ್ತು 5 ಐಪಿಎಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಬಂಧಿತ ಐಎಎಸ್ ಅಧಿಕಾರಿಗಳಲ್ಲಿ ಮೂವರು ರಾಜಸ್ತಾನ ಪದವೃಂದ, ಉ.ಪ್ರದೇಶ , ಒಡಿಶಾ , ಬಿಹಾರ, ಕೇಂದ್ರಾಡಳಿತ ಪ್ರದೇಶ ಮತ್ತು ಪ.ಬಂಗಾಲ ಪದವೃಂದದಿಂದ ತಲಾ ಇಬ್ಬರು, ಗುಜರಾತ್, ಅಸ್ಸಾಂ, ಛತ್ತೀಸ್‌ಗಢ, ಹರ್ಯಾನ, ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ತಲಾ ಒಬ್ಬರು ಅಧಿಕಾರಿಗಳು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News