ಗೋವಾದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಗೊಳಿಸಬೇಕು: ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ
Update: 2017-04-13 14:41 IST
ಪಣಜಿ,ಎ. 13: ಗೋವಾದಲ್ಲಿ ಸಂಪೂರ್ಣ ಗೋಹತ್ಯೆಯನ್ನು ನಿಷೇಧ ಜಾರಿಗೊಳಿಸಬೇಕೆಂದು ಬಿಜೆಪಿ ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಆಗ್ರಹಿಸಿದೆ. ಈಗ ನೂರಾರು ದನಗಳನ್ನು ಕೊಲ್ಲುತ್ತಿರುವ ಗೋವಾ ಮೀಟ್ ಕಾಂಪ್ಲೆಕ್ಸ್ ಲಿಮಿಟೆಡ್ ಕಂಪೆನಿಯನ್ನು ಮುಚ್ಚಬೇಕೆಂದುಪಾರ್ಟಿ ಮುಖಂಡ ಹಾಗೂ ಸಚಿವ ಸುದಿನ್ ಧವಲಿಕರ್ ಆಗ್ರಹಿಸಿದ್ದಾರೆ. ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಗೆ ತರಬೇಕೆಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಕರೆನೀಡಿದ್ದು, ಅದಕ್ಕೆ ಸುದಿನ್ ಧವಲಿಕರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.