×
Ad

ಮಾಯಾವತಿ ಸೋದರ ಆನಂದ್ ಈಗ ಬಿಎಸ್‌ಪಿಯ ಉಪಾಧ್ಯಕ್ಷ

Update: 2017-04-14 19:36 IST

 ಲಕ್ನೋ,ಎ.14: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಸಂದರ್ಭ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತನ್ನ ಸೋದರ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷ ರನ್ನಾಗಿ ನೇಮಕಗೊಳಿಸಿದರು.

ನಕಲಿ ಕಂಪನಿಗಳೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಆನಂದ್ ಬಿಎಸ್‌ಪಿಯ ಪ್ರಾಥಮಿಕ ಸದಸ್ಯರೂ ಆಗಿರಲಿಲ್ಲ.

ತನ್ನ ಅನುಪಸ್ಥಿತಿಯಲ್ಲಿ ಪಕ್ಷದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಮತ್ತು ಪಕ್ಷಕ್ಕೆ ಸದಸ್ಯರನ್ನು ನೇಮಿಸಿಕೊಳ್ಳಲೂ ಮಾಯಾವತಿ ಆನಂದ್‌ಗೆ ಅಧಿಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News