×
Ad

ಉ.ಪ್ರದೇಶದಲ್ಲಿ ಪೊಲೀಸರೊಂದಿಗೆ ಕೊಲೆ ಆರೋಪಿಯ ಶಾಪಿಂಗ್!

Update: 2017-04-14 20:16 IST

ಪ್ರತಾಪಗಡ,ಎ.14: ಉತ್ತರ ಪ್ರದೇಶದ ಪೊಲೀಸ್ ಇಲಾಖೆಗೆ ಮುಜುಗರವನ್ನುಂಟು ಮಾಡಬಹುದಾದ ಬೆಳವಣಿಗೆಯೊಂದರಲ್ಲಿ ಕೊಲೆ ಆರೋಪಿಯೋರ್ವ ಪೊಲೀಸ ರೊಂದಿಗೆ ಇಲ್ಲಿಯ ಮಾಲ್‌ವೊಂದರಲ್ಲಿ ಶಾಪಿಂಗ್ ನಿರತನಾಗಿದ್ದನ್ನು ತೋರಿಸುವ ವೀಡಿಯೊವೊಂದು ಬಹಿರಂಗಗೊಂಡಿದೆ.

ಕಳೆದ ವರ್ಷದ ಫೆಬ್ರುವರಿಯಲ್ಲಿ ಮಾಣಿಕಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿಸ ಲ್ಪಟ್ಟಿದ್ದ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕೊಲೆ ಮಾಡಿದ್ದ ಆರೋಪಿ ವಿಕಾಸ್ ಮಿಶ್ರಾನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕಾಗಿತ್ತು. ಆದರೆ ಆತ ಕೈಕೋಳಗಳಿಲ್ಲದೆ ಪೊಲೀಸರೊಂದಿಗೆ ಹಾಯಾಗಿ ಶಾಪಿಂಗ್ ನಡೆಸುತ್ತಿದ್ದ. ಮಾಲ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News