ಧೋನಿ-ಕೊಹ್ಲಿ ಬಗ್ಗೆ ಬ್ರಾವೊ ಗಾಯನ!

Update: 2017-04-21 18:16 GMT

ರಾಜ್‌ಕೋಟ್, ಎ.21: ವಿಂಡೀಸ್‌ನ ಆಲ್‌ರೌಂಡರ್ ಡ್ವೆಯ್ನೆ ಬ್ರಾವೊ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್‌ನ ಪರವಾಗಿ ಆಡುವುದರೊಂದಿಗೆ ಈಗಾಗಲೇ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ.

ಆದರೆ, ಬ್ರಾವೊ ಗಾಯನದ ಮೂಲಕವೂ ವಿಶ್ವದೆಲ್ಲ್ಲೆಡೆ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅವರು ಹಾಡಿರುವ ‘ಚಾಂಪಿಯನ್’ ಹಾಡು ಸೂಪರ್ ಹಿಟ್ ಆಗಿದೆ.

 ತನ್ನ ಚೊಚ್ಚಲ ಪ್ರಯತ್ನದಲ್ಲಿ ಭಾರೀ ಯಶಸ್ಸು ಸಾಧಿಸಿರುವ ಬ್ರಾವೊ ಈವರ್ಷದ ಐಪಿಎಲ್‌ನಲ್ಲಿ ಇನ್ನಷ್ಟೇ ಆಡಬೇಕಾಗಿದೆ. ಗಾಯದ ಸಮಸ್ಯೆಯಿಂದಾಗಿ ಅವರಿಗೆ ಈತನಕ ಆಡಲು ಸಾಧ್ಯವಾಗಿಲ್ಲ. ಇದೀಗ ಬ್ರಾವೊ ಅವರು ಭಾರತದ ಹಾಲಿ ಹಾಗೂ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿಯ ಬಗ್ಗೆ ಹಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ.

ಪ್ರಸ್ತುತ ಗುಜರಾತ್ ಲಯನ್ಸ್ ತಂಡ ಬ್ರಾವೊರ ಸೇವೆಯಿಂದ ವಂಚಿತವಾಗಿದೆ. ಕೇವಲ 1 ಪಂದ್ಯ ಜಯಿಸಿರುವ ಲಯನ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News