ಶುಲ್ಕ ಪಡೆಯದೆ ಡಿಜಿಪಿ ಸೆನ್‌ಕುಮಾರ್‌ಗೆ ಕೇಸು ಗೆದ್ದು ಕೊಟ್ಟ ವಕೀಲರು !

Update: 2017-04-25 07:41 GMT

ಹೊಸದಿಲ್ಲಿ,ಎ. 25: ಸುಪ್ರೀಂ ಕೋರ್ಟು ನೀಡಿದ ಮಹತ್ವದ ತೀರ್ಪಲ್ಲಿ ಸೆನ್‌ಕುಮಾರ್ ಮತ್ತೆ ಕೇರಳದ ಡಿಜಿಪಿಯಾಗಿ ನೇಮಕಗೊಳ್ಳುತ್ತಿರುವಾಗ ಹಣ ಪಡೆಯದೆ ಕೇಸು ವಾದಿಸಿದ ವಕೀಲರನ್ನು ಅವರು ಕೃತಜ್ಞತೆಯಿಂದ ನೆನೆಯುತ್ತಿದ್ದಾರೆ. ಕೇರಳ ಸರಕಾರ ಭಾರೀ ಮೊತ್ತದ ಶುಲ್ಕನೀಡಿ ಅಡ್ವೊಕೇಟ್ ಹರೀಶ್ ಸಾಳ್ವೆಯವರನ್ನು ತನ್ನ ನ್ಯಾಯವಾದಿಯಾಗಿ ಅದುನೇಮಕಗೊಳಿಸಿತ್ತು. ಆದರೆ ಸುಪ್ರೀಂಕೋರ್ಟು ವಕೀಲರಾದ ಅಡ್ವೊಕೇಟ್ ದುಷ್ಯಂತ್ ದವೆ, ವಕೀಲ ಹಾರಿಸ್ ಬೀರಾನ್ ಶುಲ್ಕ ಪಡೆಯದೆ ಸೆನ್‌ಕುಮಾರ್‌ರಿಗಾಗಿ ವಾದಿಸಿ ಗೆದ್ದಿದ್ದಾರೆ.

ಅಡ್ವೊಕೇಟ್ ಪ್ರಶಾಂತ್ ಭೂಷಣ್ ಮಾತ್ರ ಸೆನ್ ಕುಮಾರ್‌ರಿಂದ ನೆಪ ಮಾತ್ರಕ್ಕೆ ವಕೀಲರ ಶುಲ್ಕ ಪಡೆದಿದ್ದರು. ತಾನು ಸುಪ್ರೀಂಕೋರ್ಟಿಗೆ ಮೊರೆಹೋದಾಗ ಶುಲ್ಕ ಇಲ್ಲದೆ ಅಡ್ವೊಕೇಟ್ ಹಾರಿಸ್ ಬಿರಾನ್ ವಕಾಲತ್ ವಹಿಸಿಕೊಂಡರು ಎಂದು ಸೆನ್‌ಕುಮಾರ್ ಹೇಳಿದರು. ಹಾರಿಸ್‌ರೊಂದಿಗೆ ಹಾಜರಾದ ಹಿರಿಯ ವಕೀಲರಾದ ದುಷ್ಯಂತ್ ದವೆ ಮತ್ತು ಪ್ರಶಾಂತ್ ಭೂಷಣ್ ದೊಡ್ಡ ಸಹಾಯ ತನಗೆ ಮಾಡಿದ್ದಾರೆ ಎಂದು ಸೆನ್‌ಕುಮಾರ್ ಸ್ಮರಿಸಿಕೊಳ್ಳುತ್ತಿದ್ದಾರೆ. ಅಪಿಲಿಯೇಟ್ ಟ್ರಬ್ಯೂನಲ್ ಮತ್ತು ಹೈಕೋರ್ಟು ವಜಾಗೊಳಿಸಿದ ಕೇಸು ಆಗಿದ್ದರೂ ಮೆರಿಟ್ ಇದೆ ಎಂದು ಮನಗಂಡು ಐತಿಹಾಸಿಕ ತೀರ್ಪಿಗಾಗಿ ದುಷ್ಯಂತ್ ದವೆ ಶುಲ್ಕ ಪಡೆಯದೆ ಹಲವಾರು ದಿವಸಗಳವರೆಗೆ ವಾದಿಸಿದರು. ಆದರೆ ಪ್ರಶಾಂತ್ ಭೂಷಣ್ ನೆಪಕ್ಕೆ ಮಾತ್ರ ಶುಲ್ಕ ಪಡೆದಿದ್ದಾರೆಂದು ವಕೀಲ ಹಾರಿಸ್ ಬೀರಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News