ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ; ಸತತ ಮೂರನೆ ಬಾರಿ ಆಡಳಿತ ಚುಕ್ಕಾಣಿ ಹಿಡಿಯುವತ್ತ ಬಿಜೆಪಿ

Update: 2017-04-26 05:10 GMT

ಹೊಸದಿಲ್ಲಿ, ಎ.26: ದಿಲ್ಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ  ಭರ್ಜರಿ ಮೇಲುಗೈ ಸಾಧಿಸಿದ್ದು, ಸತತ ಮೂರನೆ ಬಾರಿ ಆಡಳಿತದ   ಚುಕ್ಕಾಣಿ ಹಿಡಿಯುತ್ತ ಮುನ್ನುಗ್ಗಿದೆ. ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಎರಡನೆ ಸ್ಥಾನಕ್ಕಾಗಿ ಕಾಂಗ್ರೆಸ್ ಜೊತೆ ಪೈಪೋಟಿ ನಡೆಸುತ್ತಿದೆ.

ಮೋದಿ ಅಲೆಯ ನಡುವೆಯೂ ಬಹುಮತ ಗಳಿಸುವ ವಿಶ್ವಾಸದಲ್ಲಿದ್ದ ಆಪ್ ಲೆಕ್ಕಾಚಾರ ತಲೆಕೆಳಗಾಗಿದೆ. ಒಟ್ಟು 270 ಸ್ಥಾನಗಳ ಪೈಕಿ ಬಿಜೆಪಿ 181, ಆಪ್ 40, ಕಾಂಗ್ರೆಸ್ 38 ಮತ್ತು 11 ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಮುನ್ನಡೆ ಸಾಧಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News